ಬೆಂಗಳೂರು : ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡಿದ್ದ ಹಲವು ಸಾಲುಗಳಲ್ಲಿ ಒಂದಾದ ಸಾಲು ʼಇದ್ರೆ ನೆಮ್ದಿಯಾಗಿರ್ಬೇಕ್ʼ ಎನ್ನುವ ಸಾಲು ಸಹ ಒಂದು, ನಟ ದರ್ಶನ ಇತ್ತಿಚೆಗೆ ಸಾಮಾಜಿಕ ಜಾಲತಾಣದಲ್ಲಿ ಬಿಗ್ ಅಪಡೇಟ್ ನೀಡುವುದಾಗಿ ಹೇಳಿದ್ದರು. ಅದರಂತೆ ಇಂದು ಬಹು ನೀರಿಕ್ಷತ ಚಿತ್ರ ಡೆವಿಲ್ ಚಿತ್ರದ ಇದ್ರೆ ನೆಮ್ಮದಿಯಾಗ ಇರಬೇಕು ಎಂಬ ಮೊದಲ ಹಾಡು ಬಿಡುಗಡೆ ಕುರಿಂತೆ ಅಪಡೆಟ್ ನೀಡಿದ್ದಾರೆ.
‘ಚಾಲೆಂಜಿಂಗ್ ಸ್ಟಾರ್’ ದರ್ಶನ್ ತೂಗುದೀಪ ಅಭಿಮಾನಿಗಳಿಗೆ ಡೆವಿಲ್ ಚಿತ್ರದ ಕುರಿತಂತೆ ಸಿಹಿಸುದ್ದಿ ನೀಡಿದ್ದಾರೆ. ಸರಿಗಮ ಕನ್ನಡ ಯೂಟ್ಯೂಬ್ ಚಾನೆಲ್‌ನಲ್ಲಿ ಡೆವಿಲ್ ಚಿತ್ರದ ಇದ್ರೆ ನೆಮ್ಮದಿಯಾಗ ಇರಬೇಕು ಎಂಬ ಹಾಡು ಆಗಸ್ಟ್ 15 ರಂದು ಬೆಳಗ್ಗೆ 10 ಗಂಟೆ 5 ನಿಮಿಷಕ್ಕೆ ಬಿಡುಗಡೆಯಾಗಲಿದೆ ಎಂದು ನಟ ದರ್ಶನ ಪೋಸ್ಟ್ ಮಾಡಿದ್ದಾರೆ. ಪೋಸ್ಟ್ ಮಾಡಿದ ಕೆಲ ಗಂಟೆಯಲ್ಲೇ ಲಕ್ಷಕ್ಕೂ ಅಧಿಕ ಲೈಕ್ಸ್ ಬಂದಿರುವದು ಡೆವಿಲ್ ಕ್ರೇಜ್ ತೋರಿಸುತ್ತದೆ.
ದಕ್ಷಿಣ ಭಾರತದ ಬಹು ಬೇಡಿಕೆಯ ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್ ಅವರು ‘ದಿ ಡೆವಿಲ್’ ಸಿನಿಮಾದ ಹಾಡುಗಳಿಗೆ ಸಂಗೀತ ಸಂಯೋಜನೆ ಮಾಡಿದ್ದಾರೆ. ಕನ್ನಡದ ಸೇರದಂತೆ ತಮಿಳು ಹಾಗೂ ತೆಲುಗಿನಲ್ಲಿ ಸಂಗೀತದ ಚಾಪು ಮೂಡಿಸಿ ಸದ್ದಾಗಿದ್ದ ಅಜನೀಶ್ ಲೋಕನಾಥ್ ಮತ್ತು ದರ್ಶನ್ ಕಾಂಬಿನೇಷನ್‌ನ ಮೊದಲ ಸಿನಿಮಾ ಇದಾಗಿದೆ. ಹೀಗಾಗಿ ಅಭಿಮಾನಿಗಳಲ್ಲಿ ಸಾಕಷ್ಟು ನಿರೀಕ್ಷೆ ಮೂಡಿಸಿದೆ. 2023 ಡಿಸೆಂಬರ್ ತಿಂಗಳಲ್ಲಿ ರಿಲೀಸ್ ಆಗಿದ್ದ ಕಾಟೇರ ಸಿನಿಮಾ ನಂತರ, ಡಿ-ಬಾಸ್ ದರ್ಶನ್ ತೂಗುದೀಪ್ ಅವರ ಯಾವುದೇ ಸಿನಿಮಾ ಬಂದಿಲ್ಲ ನಟ ದರ್ಶನ ಅವರಿಂದ ಸುಮಾರು 20 ತಿಂಗಳ ಬಳಿಕ ಅವರ ಸಿನಿಮಾವೊಂದರ ಹಾಡು ರಿಲೀಸ್ ಆಗುತ್ತಿದೆ.
‘ಡಿ ಬಾಸ್’ ದರ್ಶನ್ ಮತ್ತು ರಚನಾ ರೈ ಮುಖ್ಯ ಭೂಮಿಕೆಯಲ್ಲಿ ಇರುವ ‘ದಿ ಡೆವಿಲ್’ ಸಿನಿಮಾವು ಭಾರಿ ನಿರೀಕ್ಷೆಯನ್ನು ಹುಟ್ಟುಹಾಕಿದೆ. ಚಿತ್ರಿಕರಣ ಆರಂಭವಾದಾಗಿನಿಂದ ಸದ್ದು ಮಾಡುತ್ತಲೆ ಇದೆ. ‘ತಾರಕ್’ ಬಳಿಕ ನಿರ್ದೇಶಕ ‘ಮಿಲನ’ ಪ್ರಕಾಶ್ ಅವರು ಪುನಃ ದರ್ಶನ್‌ಗೆ ಜೊತೆಯಾಗಿದ್ದಾರೆ. ದರ್ಶನ್, ರಚನಾ ರೈ ಜೊತೆಗೆ ಅಚ್ಯುತ್ ಕುಮಾರ್, ಮಹೇಶ್ ಮಾಂಜ್ರೇಕರ್, ಶರ್ಮಿಳಾ ಮಾಂಡ್ರೆ, ಚಂದು ಗೌಡ, ವಿನಯ್ ಗೌಡ ಸೇರಿದಂತೆ ಅನೇಕರ ಕಲಾವಿದರು ಈ ಚಿತ್ರದಲ್ಲಿ ನಟಿಸಿದ್ದಾರೆ.
‘ರಾಬರ್ಟ್’, ‘ಕಾಟೇರ’ ಖ್ಯಾತಿಯ ಸುಧಾಕರ್ ಎಸ್ ರಾಜ್ ಅವರು ಈ ಸಿನಿಮಾಕ್ಕೆ ಛಾಯಾಗ್ರಹಣ ಮಾಡಿದ್ದಾರೆ. ಕಥೆ, ಚಿತ್ರಕಥೆಯನ್ನು ಬರೆದಿರುವ ಪ್ರಕಾಶ್ ವೀರ್ ನಿರ್ದೇಶನದ ‘ಡೆವಿಲ್’ ಚಿತ್ರವನ್ನು ಶ್ರೀ ಜೈಮಾತಾ ಕಂಬೈನ್ಸ್ ಬ್ಯಾನರ್ ಭರ್ಜರಿಯಾಗಿ ನಿರ್ಮಿಸಿದೆ. ಬೆಂಗಳೂರು, ರಾಜಸ್ಥಾನ ಮತ್ತು ಬ್ಯಾಂಕಾಕ್ ಸೇರಿದಂತೆ ವಿವಿಧ ಸ್ಥಳಗಳಲ್ಲಿ ಚಿತ್ರೀಕರಣ ನಡೆದಿದೆ. ‘ದಿ ಡೆವಿಲ್’ ಸಿನಿಮಾದ ಶೂಟಿಂಗ್ ಮುಕ್ತಾಯಗೊಂಡಿದೆ ಎನ್ನಲಾಗಿದ್ದು ಅಕ್ಟೋಬರ್ ತಿಂಗಳಲ್ಲಿ ಚಿತ್ರ ಬಿಡುಗಡೆ ಆಗಬಹುದು ಎನ್ನಲಾಗಿದೆ. ಆದರೆ ಚಿತ್ರ ತಂಡ ಈ ಕುರಿತಂತೆ ಯಾವ ಮಾಹಿತಿಯನ್ನು ನೀಡಿಲ್ಲ.