Bank Holiday: ಆಗಸ್ಟ್‌ನಲ್ಲಿ ಬ್ಯಾಂಕ್‌ಗಳಿಗೆ 15 ದಿನ ರಜೆ, ಪಟ್ಟಿ

0
73

ಹುಬ್ಬಳ್ಳಿ: ಆಗಸ್ಟ್‌ ತಿಂಗಳಲ್ಲಿ ನೀವೇನಾದರೂ ಬ್ಯಾಂಕ್‌ನ ವ್ಯವಹಾರ ಮಾಡುವವರಿದ್ದರೆ ಬ್ಯಾಂಕ್‌ ರಜೆ ದಿನಗಳನ್ನು ನೋಡಲೇಬೇಕು. ಏಕೆಂದರೆ ಆಗಸ್ಟ್‌ ತಿಂಗಳಿನಲ್ಲಿ ಬರೋಬ್ಬರಿ 15 ದಿನಗಳು ರಜೆ ಬಂದಿವೆ. ಹೀಗಾಗಿ ಬರುವ ತಿಂಗಳು ಬ್ಯಾಂಕ್ ವ್ಯವಹಾರ‌ ಮಾಡುವವರಿಗೆ ಇಲ್ಲಿದೆ ಮಾಹಿತಿ.

2025 ಆಗಸ್ಟ್ ತಿಂಗಳಿನಲ್ಲಿ ಒಟ್ಟು 9 ಹಬ್ಬಗಳು ಬಂದಿವೆ. ಸರಿಸುಮಾರು ಅರ್ಧ ತಿಂಗಳುಗಳ ಕಾಲ ಬ್ಯಾಂಕ್ ಕೆಲಸದ ಮೇಲೆ ಇದು ಪರಿಣಾಮ ಬೀರಲಿದೆ. ಇದರಲ್ಲಿ ಕೆಲ ರಜಾದಿನಗಳು ರಾಷ್ಟ್ರವ್ಯಾಪಿಯಾಗಿದ್ದರೆ, ಇನ್ನು ಕೆಲವು ರಜೆಗಳು ಪ್ರಾದೇಶಿಕ ಮತ್ತು ರಾಜ್ಯಗಳ ಮೇಲೆ ಬೇರೆ ಬೇರೆಯಾಗಿವೆ.

ವಾರಾಂತ್ಯದಲ್ಲಿ ಕೆಲವು ರಜಾ ದಿನಗಳು ಬಂದಿರುವುದರಿಂದ ಬ್ಯಾಂಕಿಂಗ್ ಕಾರ್ಯಾಚರಣೆಗಳ ಮೇಲೆ ಇವು ಇನ್ನಷ್ಟು ಪರಿಣಾಮಕ್ಕೆ ಕಾರಣವಾಗಬಹುದು. ಸಾಮಾನ್ಯವಾಗಿ 2ನೇ ಮತ್ತು 4ನೇ ಶನಿವಾರ ಹಾಗೂ ಎಲ್ಲ ಭಾನುವಾರಗಳಂದು ಬ್ಯಾಂಕ್‌ಗಳಿಗೆ ರಜೆ ಇರುತ್ತದೆ.

3ನೇ ಶನಿವಾರ ಶ್ರೀಕೃಷ್ಣ ಜನ್ಮಾಷ್ಟಮಿ ಇರುವುದರಿಂದ ಅಂದು ರಜೆ ದಿನವಾಗಿದೆ. ಹೀಗಾಗಿ ಆಗಸ್ಟ್‌ನಲ್ಲಿ ಬರುವ 5 ಶನಿವಾರಗಳ ಪೈಕಿ ಮೊದಲ ಮತ್ತು ಕೊನೆಯ ಶನಿವಾರ ಮಾತ್ರ ಬ್ಯಾಂಕ್‌ಗಳು ಕಾರ್ಯನಿರ್ವಹಿಸುತ್ತವೆ.

3ನೇ ಶನಿವಾರದ ಹಿಂದಿನ ದಿನ ಶುಕ್ರವಾರದಂದು ಸ್ವಾತಂತ್ರ್ಯ ದಿನಾಚರಣೆ ಇದೆ. ಅಂದು ಭಾರತದಾದ್ಯಂತ ಎಲ್ಲ ಬ್ಯಾಂಕುಗಳಿಗೆ ರಜೆ ದಿನ. ಇದರಿಂದಾಗಿ ಶುಕ್ರವಾರ ಸ್ವಾತಂತ್ರ್ಯೋತ್ಸವ, ಶನಿವಾರ ಕೃಷ್ಣ ಜನ್ಮಾಷ್ಟಮಿ ಮತ್ತು ರವಿವಾರ ಸಾಮಾನ್ಯ ರಜೆ.

ಆದ್ದರಿಂದ ಗುರುವಾರದ ನಂತರ ಸತತ 3 ದಿನಗಳು ರಜಾ ದಿನವಾಗಿದ್ದು, ಸೋಮವಾರವೇ ಬ್ಯಾಂಕ್‌ ಕಾರ್ಯಾಚರಣೆ ಆರಂಭವಾಗಲಿದೆ. ಒಟ್ಟು 5 ಭಾನುವಾರ, 3 ಶನಿವಾರ ಸೇರಿದಂತೆ ಒಟ್ಟು 15 ದಿನಗಳ ಕಾಲ ಬ್ಯಾಂಕ್‌ಗಳಿಗೆ ರಜೆ ಇರಲಿದೆ. ಈ ಎಲ್ಲ ರಜಾ ದಿನಗಳ ಸಂಪೂರ್ಣ ವಿವರ ಇಲ್ಲಿದೆ.

ಆಗಸ್ಟ್ 3, ಭಾನುವಾರ: ಸಾಮಾನ್ಯ ರಜೆ
ಆಗಸ್ಟ್ 8, ಶುಕ್ರವಾರ: ಸಿಕ್ಕಿಂನಲ್ಲಿ ಟೆಂಡೋಂಗ್ ಲೋ ರುಮ್ ಫಾಟ್ ಆಚರಣೆ, ಒಡಿಶಾದಲ್ಲಿ ಝುಲನ್ ಪೂರ್ಣಿಮಾ
ಆಗಸ್ಟ್ 9, ಶನಿವಾರ: ರಕ್ಷಾ ಬಂಧನ, ಎರಡನೇ ಶನಿವಾರ ರಜೆ
ಆಗಸ್ಟ್ 10, ಭಾನುವಾರ: ಸಾಮಾನ್ಯ ರಜೆ
ಆಗಸ್ಟ್ 13, ಬುಧವಾರ: ಮಣಿಪುರದಲ್ಲಿ ದೇಶಭಕ್ತರ ದಿನ
ಆಗಸ್ಟ್ 15, ಶುಕ್ರವಾರ: ಸ್ವಾತಂತ್ರ್ಯ ದಿನಾಚರಣೆ
ಆಗಸ್ಟ್ 16, ಶನಿವಾರ: ಕೃಷ್ಣ ಜನ್ಮಾಷ್ಟಮಿ
ಆಗಸ್ಟ್ 17, ಭಾನುವಾರ: ಸಾಮಾನ್ಯ ರಜೆ
ಆಗಸ್ಟ್ 19, ಮಂಗಳವಾರ: ತ್ರಿಪುರಾದಲ್ಲಿ ಮಹಾರಾಜ ಬೀರ್ ಬಿಕ್ರಮ್ ಕಿಶೋರ್ ಮಾಣಿಕ್ಯ ಬಹಾದೂರ್ ಜನ್ಮದಿನ
ಆಗಸ್ಟ್ 23, ಶನಿವಾರ: ನಾಲ್ಕನೇ ಶನಿವಾರ ರಜೆ
ಆಗಸ್ಟ್ 24, ಭಾನುವಾರ: ಸಾಮಾನ್ಯ ರಜೆ
ಆಗಸ್ಟ್ 25, ಸೋಮವಾರ: ಅಸ್ಸಾಂನಲ್ಲಿ ಶ್ರೀಮಂತ ಶಂಕರದೇವರ ತಿರುಭಾವ ತಿಥಿ
ಆಗಸ್ಟ್ 27, ಬುಧವಾರ: ಗಣೇಶ ಚತುರ್ಥಿ
ಆಗಸ್ಟ್ 28, ಗುರುವಾರ: ಗೋವಾದಲ್ಲಿ ನುವಾಖ್ಯೆ
ಆಗಸ್ಟ್ 31, ಭಾನುವಾರ: ಸಾಮಾನ್ಯ ರಜೆ

ಈ ಮೇಲಿನ ರಜೆಗಳು ಪ್ರದೇಶವಾರು ಬದಲಾವಣೆ ಆಗುತ್ತವೆ. ಅಲ್ಲದೇ ರಜೆ ದಿನಗಳಂದು ಗ್ರಾಹಕರು ನೆಟ್ ಬ್ಯಾಂಕಿಂಗ್, UPI, ATM ವಹಿವಾಟುಗಳ ಮೂಲಕ ವ್ಯವಹರಿಸಲು ಅವಕಾಶವಿರುತ್ತದೆ.

Previous articleಬೆಂಗಳೂರು: ಈ ರಸ್ತೆಯ ಟೋಲ್ ದರ ಕೇಳಿ ವಾಹನ ಸವಾರರು ಶಾಕ್
Next articleIndia-England 5th Test: ಇಂಗ್ಲೆಂಡ್‌ ಪ್ಲೇಯಿಂಗ್ 11 ಪ್ರಕಟ

LEAVE A REPLY

Please enter your comment!
Please enter your name here