6 ತಿಂಗಳಿಗೊಮ್ಮೆ ಹಾಲಿನ ದರ ಹೆಚ್ಚಳ!

0
11

ಬೆಂಗಳೂರು: ಕನಿಷ್ಠ 6 ತಿಂಗಳಿಗೊಮ್ಮೆ ಗರಿಷ್ಠ 5% ಮಾರಾಟ ದರವನ್ನು ಹೆಚ್ಚಳ ಮಾಡಲು ಕೆಎಂಎಫ್ ಹಂತದಲ್ಲೇ ಅನುಮತಿ ನೀಡಬೇಕು ಎಂದು ಸಿಎಂ ಸಿದ್ದರಾಮಯ್ಯ ಅವರಿಗೆ ಪಶುಸಂಗೋಪನೆ ಇಲಾಖೆ ಮನವಿ ಸಲ್ಲಿಸಿದೆ.
ಈ ಕುರಿತು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಪಶುಸಂಗೋಪನಾ ಸಚಿವ ಕೆ. ವೆಂಕಟೇಶ್ ಅವರು, ಹಾಲಿನ‌ ದರ ಏರಿಕೆಗೆ ರೈತರು ಹಾಗೂ ಹಾಲು ಉತ್ಪಾದಕರ ಒಕ್ಕೂಟದಿಂದ ಒತ್ತಡ ಇದೆ. ಆದರೆ ಸದ್ಯಕ್ಕೆ ಹೆಚ್ಚಳ ಮಾಡಲ್ಲ ಎಂದರು. ದರ ವಿಚಾರವಾಗಿ ಆಗುತ್ತಿರುವ ನಷ್ಟದ ಬಗ್ಗೆ ಸಭೆಯಲ್ಲಿ ಒಕ್ಕೂಟಗಳು ತಮ್ಮ ಸಮಸ್ಯೆಯನ್ನು ತೋಡಿಕೊಂಡಿವೆ. ಆದರೆ ಹಾಲು ದರ ಏರಿಕೆ ಬಗ್ಗೆ ಯಾವುದೇ ಪ್ರಸ್ತಾಪ ಇಲ್ಲ. 47 ರೂಪಾಯಿ ಲೀಟರ್ ಗೆ ನಮ್ಮಲ್ಲಿ ಇದೆ. ಬೇರೆ ಬೇರೆ ರಾಜ್ಯಗಳಲ್ಲಿ ಹಾಲಿನ ಇನ್ನೂ ಹೆಚ್ಚಿದೆ ಎಂದರು.

Previous articleರಾಜ್ಯದಲ್ಲಿ ಎರಿಶಾ ಇ ಮೊಬಿಲಿಟಿ
Next article95 ವರ್ಷದ ದೇವಿಗೆ 3 ಚಿನ್ನದ ಪದಕ