Home Advertisement
Home ತಾಜಾ ಸುದ್ದಿ 25,000 ಕಿ.ಮೀ ಸೈಕಲ್‌ ಯಾತ್ರೆ: ಆಶಾ ಮಾಳವೀಯಾಗೆ ಶುಭ ಹಾರೈಸಿದ ಸಿಎಂ

25,000 ಕಿ.ಮೀ ಸೈಕಲ್‌ ಯಾತ್ರೆ: ಆಶಾ ಮಾಳವೀಯಾಗೆ ಶುಭ ಹಾರೈಸಿದ ಸಿಎಂ

0
77

ಬೆಂಗಳೂರು: 28 ರಾಜ್ಯಗಳ ಸೈಕಲ್ ಯಾತ್ರೆ ಹಮ್ಮಿಕೊಂಡಿರುವ ರಾಷ್ಟ್ರಮಟ್ಟದ ಮಹಿಳಾ ಕ್ರೀಡಾಪಟು ಹಾಗು ಪರ್ವತಾರೋಹಿ ಆಶಾ ಮಾಳವೀಯ ನಿನ್ನೆ ಬೆಂಗಳೂರಿಗೆ ಆಗಮಿಸಿದ್ದು ಮುಖ್ಯಮಂತ್ರಿ ಸಿದ್ದರಾಮಯ್ಯ ಅಭಿಯಾನದ ಉದ್ದೇಶವನ್ನು ಶ್ಲಾಘಿಸಿದ್ದಾರೆ,
ಈ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿರುವ ಅವರು ಆಶಾ ಅವರು “ಸ್ತ್ರೀ ಸಬಲೀಕರಣ ಹಾಗೂ ಸ್ತ್ರೀ ಸುರಕ್ಷತೆ”ಯ ಬಗ್ಗೆ ಜನರಲ್ಲಿ ಅರಿವು ಮೂಡಿಸುವ ಸಲುವಾಗಿ ದೇಶದ 28 ರಾಜ್ಯಗಳನ್ನು ಒಳಗೊಂಡಂತೆ ಒಟ್ಟು 25,000 ಕಿ.ಮೀ ಸೈಕಲ್‌ ಯಾತ್ರೆ ಕೈಗೊಂಡಿದ್ದಾರೆ. ತಮ್ಮ ಜಾಗೃತಿ ಅಭಿಯಾನದ ಭಾಗವಾಗಿ ಇಂದು ಬೆಂಗಳೂರಿಗೆ ಆಗಮಿಸಿದ ವೇಳೆ ಮುಖ್ಯಮಂತ್ರಿಗಳು ಅವರ ಅಭಿಯಾನದ ಉದ್ದೇಶವನ್ನು ಮನಸ್ಪೂರ್ತಿಯಾಗಿ ಶ್ಲಾಘಿಸಿ, ಮುಂದಿನ ಪ್ರಯಾಣಕ್ಕೆ ಶುಭ ಹಾರೈಸಿದ್ದಾರೆ.