೩೦ ಸಾವಿರಕ್ಕೂ ಹೆಚ್ಚು ಮತಗಟ್ಟೆಗಳಲ್ಲಿ ಮತದಾನ

0
9

ಬೆಂಗಳೂರು: ರಾಜ್ಯದಲ್ಲಿ ಮೊದಲ ಹಂತದಲ್ಲಿ ಏ. ೨೬ರ ಶುಕ್ರವಾರ ನಡೆಯುವ ೧೪ ಲೋಕಸಭಾ ಕ್ಷೇತ್ರಗಳ ೩೦,೬೦೨ ಮತಗಟ್ಟೆಗಳಲ್ಲಿ ೨,೮೮,೯೯,೩೪೨ ಮಂದಿ ಮತದಾರರು ತಮ್ಮ ಹಕ್ಕು ಚಲಾಯಿಸಲಿದ್ದಾರೆ. ಇದಕ್ಕಾಗಿ ಚುನಾವಣಾ ಆಯೋಗ ಸಿದ್ಧತೆಗಳನ್ನು ಪೂರ್ಣಗೊಳಿಸಿದೆ ಎಂದು ರಾಜ್ಯ ಮುಖ್ಯ ಚುನಾವಣಾಧಿಕಾರಿ ಮನೋಜ್ ಕುಮಾರ್ ಮೀನಾ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಕ್ತ ಹಾಗೂ ನಿರ್ಭಿತಿಯಿಂದ ಮತ ಚಲಾಯಿಸಲು ಎಲ್ಲ ರೀತಿಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ೧ ಲಕ್ಷ ೪೦ ಸಾವಿರ ಮತಗಟ್ಟೆ ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ. ೫ ಸಾವಿರ ಮೈಕ್ರೋ ಅಬ್ಸರ್‌ರ‍್ಸ್, ೫೦ ಸಾವಿರ ಪೊಲೀಸರು ಹಾಗೂ ಅತೀ ಸೂಕ್ಷö್ಮ ಮತಗಟ್ಟೆಗಳಲ್ಲಿ ಅರೆಸೇನಾ ಪಡೆಗಳನ್ನು ನಿಯೋಜಿಸಲಾಗುವುದು ಎಂದರು.
೧೯ ಸಾವಿರ ಮತಗಟ್ಟೆಗಳಲ್ಲಿ ವೆಬ್‌ಕಾಸ್ಟಿಂಗ್ ವ್ಯವಸ್ಥೆ: ಏ.೨೬ರಂದು ನಡೆಯುವ ಮತದಾನದಲ್ಲಿ ೧೯,೭೦೧ ಮತಗಟ್ಟೆಗಳಲ್ಲಿ ವೆಬ್‌ಕಾಸ್ಟಿಂಗ್ ವ್ಯವಸ್ಥೆ ಅಳವಡಿಸಲಾಗಿದೆ. ೧೩೭೦ ಮತಗಟ್ಟೆಗಳಲ್ಲಿ ಸಿಸಿಟಿವಿಗಳನ್ನು ಅಳವಡಿಸಲಾಗಿದೆ. ಹೀಗಾಗಿ ಮತಗಟ್ಟೆಯಲ್ಲಿ ಮತದಾನದ ವೇಳೆ ಅಹಿತರಕ ಘಟನೆಗಳು ನಡೆದರೆ ಚುನಾವಣಾ ನಿಯಂತ್ರಣ ಕೊಠಡಿಗೆ ಎಲ್ಲ ಮಾಹಿತಿ ದೊರೆಯುತ್ತದೆ. ಇದರಿಂದ ಪಾರದರ್ಶಕವಾಗಿ ಚುನಾವಣೆ ನಡೆಯುವಂತೆ ಮಾಡಬಹುದು ಎಂದರು.

Previous articleಮದುವೆಯಲ್ಲಿ ರಸಮಲೈ ತಿಂದ ೭೦ ಅತಿಥಿಗಳು ಅಸ್ವಸ್ಥ
Next articleರಾಮಕೃಷ್ಣ ಮಠದ ಅಧ್ಯಕ್ಷ ಗೌತಮಾನಂದಜೀ