ಬೆಂಗಳೂರು: ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳ ಮುಂದೆ ವ್ಯಕ್ತಿಯೊಬ್ಬರು ಬ್ಲೇಡ್‌ನಿಂದ ತಮ್ಮ ಕತ್ತು ಕೊಯ್ದುಕೊಂಡ ಘಟನೆ ನಡೆದಿದೆ.
ಮಧ್ಯಾಹ್ನ ವೇಳೆ ಮುಖ್ಯ ನ್ಯಾಯಮೂರ್ತಿ ಎನ್.ವಿ.ಅಂಜಾರಿಯಾ ಹಾಗೂ ನ್ಯಾಯಮೂರ್ತಿ ಎಚ್. ಪಿ.ಪ್ರಭಾಕರ ಶಾಸ್ತ್ರಿ ಅವರಿದ್ದ ವಿಭಾಗೀಯ ನ್ಯಾಯಪೀಠ ಪ್ರಕರಣಗಳ ವಿಚಾರಣೆ ಸಮಯದಲ್ಲಿ ವ್ಯಕ್ತಿಯೊಬ್ಬರು ನ್ಯಾಯಪೀಠದ ಮುಂದೆ ಬಂದು ಒಂದಷ್ಟು ಫೈಲುಗಳೊಂದಿಗೆ ನಿಂತಿದ್ದ ವ್ಯಕ್ಕಿ ಇದ್ದಕ್ಕಿದಂತೆ ಜೇಬಿನಿಂದ ಹರಿತವಾದ ಬ್ಲೇಡ್ ನಂತಹ ಆಯುಧದಿಂದ ತಮ್ಮ ಕತ್ತು ಕೊಯ್ದುಕೊಂಡಿದ್ದಾರೆ ಇನ್ನು ಗಾಯಕೊಂಡ ವ್ಯಕ್ತಿಯನ್ನು ಆಸ್ಪತ್ರೆಗೆ ಚಿಕಿತ್ಸ್‌ಗೆಂದು ಕರೆದುಕೊಂಡು ಹೊಗಲಾಗಿದೆ.