ಹೈಕೋರ್ಟ್​​ಗೆ ಬಾಂಬ್​​​ ಬೆದರಿಕೆ

0
20

ನವದೆಹಲಿ: ನ್ಯಾಯಾಲಯದ ಆವರಣದ ಮೇಲೆ ದಾಳಿ ನಡೆಸುವುದಾಗಿ ದೆಹಲಿ ಹೈಕೋರ್ಟ್ ಅಧಿಕಾರಿಗಳಿಗೆ ಬೆದರಿಕೆ ಇಮೇಲ್ ಬಂದ ಹಿನ್ನೆಲೆಯಲ್ಲಿ ಗುರುವಾರ ದೆಹಲಿ ಹೈಕೋರ್ಟ್ ನಲ್ಲಿ ಭದ್ರತೆಯನ್ನು ಹೆಚ್ಚಿಸಲಾಗಿದೆ.
ರಿಜಿಸ್ಟ್ರಾರ್ ಜನರಲ್‌ಗೆ (e mail)ಮೇಲ್​​ ಮೂಲಕ ಬಾಂಬ್​​​ ಬೆದರಿಕೆ ಬಂದಿದೆ. ಬುಧವಾರ ತಡರಾತ್ರಿ ಈ ಮೇಲ್ ಬಂದಿದ್ದು, ಹೈಕೋರ್ಟ್​​​ ಮುಂದೆ ಬಾಂಬ್​​​ ಹಾಕಲಾಗುವುದು ಎಂದು ಇದರಲ್ಲಿ ತಿಳಿಸಲಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಪೊಲೀಸರು ದೂರು ದಾಖಲಿಸಿಕೊಂಡಿದ್ದು, ತನಿಖೆಯನ್ನು ನಡೆಸುತ್ತಿದ್ದಾರೆ.

Previous articleಅಭಿವೃದ್ಧಿ ಹೊಂದಲು ಪಾರದರ್ಶಕತೆಯ ಅಗತ್ಯವಿದೆ
Next articleಬೆಳಗಾವಿ: ಕನ್ನಡತಿಗೆ ಮೇಯರ್‌ ಸ್ಥಾನ