ಹುಬ್ಬಳ್ಳಿಯ ಎಲೆಕ್ಟ್ರಾನಿಕ್ಸ್ ಮ್ಯಾನುಫ್ಯಾಕ್ಚರಿಂಗ್ ಕ್ಲಸ್ಟರ್ ಮಾಹಿತಿ ಹಂಚಿಕೊಂಡ ಎಂ.ಬಿ. ಪಾಟೀಲ್‌

0
12

ಬೆಂಗಳೂರು: ಹುಬ್ಬಳ್ಳಿ-ಧಾರವಾಡ ಸಮೀಪದ ಕೋಟೂರು-ಬೇಲೂರು ಎಲೆಕ್ಟ್ರಾನಿಕ್ಸ್ ಮ್ಯಾನುಫ್ಯಾಕ್ಚರಿಂಗ್ ಕ್ಲಸ್ಟರ್ (EMC) ನಲ್ಲಿರುವ #Nidec ಉತ್ಪಾದನಾ ಘಟಕದ ನಿರ್ಮಾಣ ಕುರಿತ ಮಾಹಿತಿ ಹಂಚಿಕೊಳ್ಳಲು ಸಂತಸವಾಗುತ್ತಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ, ಮೂಲಸೌಲಭ್ಯ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ ಹೇಳಿದ್ದಾರೆ. ಈ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿಗಳನ್ನು ಹಂಚಿಕೊಂಡು ಪೋಸ್ಟ್‌ ಮಾಡಿದ್ದು

✅ ಒಟ್ಟು ಹೂಡಿಕೆ: ₹600+ ಕೋಟಿ | 30 ಎಕರೆ ಪ್ರದೇಶ
✅ 800+ ನೇರ ಉದ್ಯೋಗ ಸೃಷ್ಟಿ
✅ ಪ್ರಮುಖ ಕ್ಷೇತ್ರಗಳಿಗೆ ಉತ್ತೇಜನ: EV ಗಳು, ಡೇಟಾ ಕೇಂದ್ರಗಳು, ನವೀಕರಿಸಬಹುದಾದ ಶಕ್ತಿ
✅ ಪ್ರಸಕ್ತ ವರ್ಷದಲ್ಲಿ ಪೂರ್ಣಗೊಳ್ಳುವ ನಿರೀಕ್ಷೆ
✅ ಉತ್ಪನ್ನಗಳು: ಆಲ್ಟರ್ನೇಟರ್‌’ಗಳು, ಮೋಟಾರ್‌’ಗಳು, ಸಿಸ್ಟಮ್ ಸಲ್ಯೂಷನ್‌’ಗಳು, ಡೇಟಾ ಕೇಂದ್ರಗಳ ಉಪಕರಣಗಳು, ಎಲೆಕ್ಟ್ರಿಕ್ ವಾಹನಗಳ ಭಾಗಗಳು, ಎಲಿವೇಟರ್‌ಗಳ ಆಯ್ಕೆಗಳು ಇತ್ಯಾದಿ

ನಮ್ಮ ಜಪಾನ್ ಪ್ರವಾಸದ ವೇಳೆ #Nidec ಕಂಪನಿಗೆ ಭೇಟಿ ನೀಡಿದ್ದು, ಅವರು ತಮ್ಮ ಕಾರ್ಯಚಟುವಟಿಕೆಗಳನ್ನು ವಿಸ್ತರಿಸಲು ಪ್ರೇರೇಪಿಸಿದ್ದೆ. ಈ ಹಿನ್ನಲೆಯಲ್ಲಿ ಕಂಪನಿ ₹150 ಕೋಟಿ ಹೆಚ್ಚುವರಿ ಹೂಡಿಕೆಯನ್ನು ಘೋಷಿಸಿದ್ದು, ಒಟ್ಟು ಹೂಡಿಕೆ ₹600 ಕೋಟಿಗೆ ಏರಿಕೆಯಾಗಿದೆ.

ಈ ರೀತಿಯ ಯೋಜನೆಗಳು ಉದ್ಯೋಗ ಸೃಷ್ಟಿ, ರಾಜ್ಯದಾದ್ಯಂತ ಸಮತೋಲಿತ ಅಭಿವೃದ್ಧಿ, ಜಾಗತಿಕ ಸಹಭಾಗಿತ್ವ, ಮತ್ತು ಕೈಗಾರಿಕಾ ಪ್ರಗತಿಗೆ ನಮ್ಮ ಬದ್ಧತೆಯನ್ನು ತೋರಿಸುತ್ತವೆ ಎಂದಿದ್ದಾರೆ.

Previous articleದೇಶದ ಕೃಷಿ ಸದೃಢವಾಗಿ ಬೆಳೆದರೆ ಆರ್ಥಿಕತೆ ಸದೃಢ
Next article‘ಡಿಜಿಟಲ್ ಅರೆಸ್ಟ್’ ವಂಚನೆಯಿಂದ ವೃದ್ಧೆ ಬಚಾವ್