ಬೆಂಗಳೂರು: ಸಹೇಲಿ ಕಿ ಉಡಾನ್ ಎಂಬುದನ್ನು ಕನ್ನಡದಲ್ಲಿ ಓತಪ್ರೋತವಾಗಿ ಅನುವಾದಿಸಿ ‘ಗೆಳತಿಯರೊಂದಿಗೆ ಹಾರೋಣ’ ಎಂದು ಶೀರ್ಷಿಕೆ ಕೊಟ್ಟಿರುವ ಶಿಕ್ಷಣ ಇಲಾಖೆಯ ಮಂತ್ರಿಗಳಿಗೆ ಮಂಡ್ಯದಲ್ಲಿ ನಡೆಯುವ ಸಾಹಿತ್ಯ ಸಮ್ಮೇಳನದಲ್ಲಿ ವಿಶೇಷವಾಗಿ ಸನ್ಮಾನಿಸಬೇಕು. ಹಿಂದಿಯಲ್ಲಿರುವ ವಾಕ್ಯವನ್ನು ಯಥಾವತ್ತಾಗಿ ತರ್ಜುಮೆ ಮಾಡಬೇಕು ಎಂದು ಎಲ್ಲಾದರೂ ನಿಯಮವಿದೆಯೇ? ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಪ್ರಶ್ನಿಸಿದ್ದಾರೆ.
ಈ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದು ಶಿಕ್ಷಣ ಇಲಾಖೆಯಲ್ಲಿ ಭಾಷಾ ತರ್ಜುಮೆದಾರರ ಕೊರತೆ ಇದೆಯೇ ? ಗೆಳತಿಯರೊಂದಿಗೆ ಸಾಧಿಸೋಣ, ಶಿಕ್ಷಣ ಕೊಡಿಸಿ, ಹೆಣ್ಣುಮಕ್ಕಳ ಬಾಳು ಬೆಳಗಿಸಿ ಹೀಗೆ ಅರ್ಥಪೂರ್ಣವಾಗಿ ತರ್ಜುಮೆ ಮಾಡಿ ಹಾಕುವುದನ್ನು ಬಿಟ್ಟು, ಮಾಡಿದ ತಪ್ಪನ್ನು ಸರಿ ಎಂದು ವಾದಿಸೋದು ಮೂರ್ಖತನ ಎಂದಿದ್ದಾರೆ.