ರಾಂಚಿ: ಜಾರ್ಖಂಡ್ ವಿಧಾನಸಭೆಯ ಸ್ಪೀಕರ್ ಆಗಿ ಜೆಎಂಎಂ ಶಾಸಕ ರವೀಂದ್ರನಾಥ ಮಹತೋ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಹಿಂದಿನ ವಿಧಾನಸಭೆಯಲ್ಲೂ ಸ್ಪೀಕರ್ ಆಗಿದ್ದ ನಾಲಾ ವಿಧಾನಸಭಾ ಕ್ಷೇತ್ರದ ಶಾಸಕ ರವೀಂದ್ರನಾಥ ಮಹತೋ ಅವರ ಹೆಸರನ್ನು ಮುಖ್ಯಮಂತ್ರಿ ಹೇಮಂತ್ ಸೊರೇನ್ ಅವರು ಸ್ಪೀಕರ್ ಸ್ಥಾನಕ್ಕೆ ಪ್ರಸ್ತಾಪಿಸಿದರು. ಜೆಎಂಎಂ ಶಾಸಕ ಮಥುರಾ ಪ್ರಸಾದ್ ಹಾಗೂ ಮೈತ್ರಿಕೂಟದ ಕೆಲ ಶಾಸಕರು ಈ ಪ್ರಸ್ತಾವಕ್ಕೆ ಅನುಮೋದನೆ ಸೂಚಿಸಿದರು. ರವೀಂದ್ರನಾಥ ಮಹತೋ ಅವರು ಸ್ಪೀಕರ್ ಆಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಹಂಗಾಮಿ ಸ್ಪೀಕರ್ ಘೋಷಣೆ ಮಾಡಿದರು.