ಸ್ಪರ್ಧೆ ಮಾಡುವ ಆಸೆ ಬತ್ತಿ ಹೋಗಿದೆ…

0
18

ಬೆಂಗಳೂರು: ಟಿಕೆಟ್ ನೀಡದಂಥ ಅನಿವಾರ್ಯ ಸ್ಥಿತಿ ನಿರ್ಮಾಣವಾಗಿದ್ದರೆ ಅದು ತನಗೆ ಬೇಡವೇ ಬೇಡ, ಸ್ಪರ್ಧೆ ಮಾಡುವ ಆಸೆ ಬತ್ತಿ ಹೋಗಿದೆ ಎಂದು ಮಾಧುಸ್ವಾಮಿ ಹೇಳಿದ್ದಾರೆ.
ಕಾಂಗ್ರೆಸ್ ಪಕ್ಷದವರು ಕರೆದರೂ ಚುನಾವಣೆಯಲ್ಲಿ ಸ್ಪರ್ಧಿಸಲಾರೆ. ಬಿಜೆಪಿಯವರು ಕರೆದರೂ ಚುನಾವಣೆಗೆ ನಿಲ್ಲುವುದಿಲ್ಲ. ನಾವು ದುಡ್ಡಲ್ಲಿ ರಾಜಕಾರಣ ಮಾಡುವವರಲ್ಲ. ತುಮಕೂರಿನಲ್ಲಿ ಹೊರಗಿನವರಿಗೆ ಟಿಕೆಟ್ ಕೊಟ್ಟದ್ದಕ್ಕೆ ನನ್ನ ಒಪ್ಪಿಗೆ ಇಲ್ಲ. ತುಮಕೂರಿನಲ್ಲಿ ಬೆಳೆದವನಾಗಿ ಹೊರಗಿನವರಿಗೆ ಟಿಕೆಟ್ ಕೊಡುವುದಕ್ಕೆ ನನ್ನ ಒಪ್ಪಿಗೆ ಇಲ್ಲ. ನನಗೆ ಕೊಡಬೇಕು ಅಂತಲ್ಲ, ಜಿಲ್ಲೆಯ ಯಾರಿಗೆ ಕೊಟ್ಟರೂ ತೊಂದರೆ ಇರಲಿಲ್ಲ. ಬಿಜೆಪಿ ಅಭ್ಯರ್ಥಿ ವಿ ಸೋಮಣ್ಣ ಮೇಲೆ ನನಗೆ ಯಾವುದೇ ಬೇಜಾರಿಲ್ಲ, ಬಿಜೆಪಿಯಿಂದ ಅಶೋಕ್ ಬಂದಿದ್ದು ನಿಜ. ಯಾಕೆ ಬಂದಿದ್ದೀರಿ ಎಂದು ಕೇಳಿದೆ. ‘ಯಾಕೆ ನಾನು ಬರಬಾರದಾ? ಮಾತನಾಡರಬಾರದಾ’ ನನಗೆ ಅಸಮಾಧಾನ ಇರುವುದು ಯಡಿಯೂರಪ್ಪನವರ ಮೇಲೆ. ನೀವೆಲ್ಲ ಅದಕ್ಕೆ ಉತ್ತರ ಕೊಡೋಕಾಗಲ್ಲ. ಯಡಿಯೂರಪ್ಪನವರೇ ಉತ್ತರ ಕೊಡಬೇಕು ಎಂದರು.

Previous articleಒಮ್ಮೆ ಹೇಳಿ ನೋಡೋಣ…: ಕುರ್ಚಿಯ expiry date ಮುಗಿಯುತ್ತದೆ
Next articleಕಣ್ಮರೆಯಾಗುತ್ತಿವೆ ಗುಬ್ಬಚ್ಚಿಗಳು