ಇಳಕಲ್ : ತಾಲೂಕಿನ ಎಲ್ಲಾ ಲಂಬಾಣಿ ತಾಂಡಾಗಳ ಲಂಬಾಣಿಗಳು ನಗರದ ಬಸವೇಶ್ವರ ಸರ್ಕಲ್‌ನಿಂದ ಭವ್ಯ ಮೆರವಣಿಗೆಯನ್ನು ಶನಿವಾರದಂದು ಸಂಜೆ ನಡೆಸಿದರು.
ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮದ ಅಧ್ಯಕ್ಷ ಶಾಸಕ ವಿಜಯಾನಂದ ಕಾಶಪ್ಪನವರ ಮೆರವಣಿಗೆಗೆ ಚಾಲನೆ ನೀಡಿ ಅದರ ಜೊತೆಗೆ ಸಾಗಿ ಕೆಲ ದೂರ ಸಂಚರಿಸಿದರು, ಈ ಸಮಯದಲ್ಲಿ ಇಳಕಲ್ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಬ್ದುಲರಜಾಕ ತಟಗಾರ ಮುರುಗೇಶ ಸಂಗಮ ಲಂಬಾಣಿ ಸಮಾಜದ ತಾಲೂಕು ಅಧ್ಯಕ್ಷ ಕೃಷ್ಣ ರಾಠೋಡ ಉಪಸ್ಥಿತರಿದ್ದರು