ಸಿಡಿಲು ಬಡಿದು ಪಿಡಿಒ ಗಂಭೀರ

0
17
ಸಿಡಿಲು

ಪುತ್ತೂರು: ಸಿಡಿಲು ಬಡಿದು ಪಿಡಿಒ ಗಂಭೀರ ಗಾಯಗೊಂಡ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಬನ್ನೂರು ಗ್ರಾಮದಲ್ಲಿ ನಡೆದಿದೆ.
ಬನ್ನೂರು ಗ್ರಾಮ ಪಂಚಾಯತ್ ಪಿಡಿಒ ಚಿತ್ರಾವತಿ(40) ಗಂಭೀರವಾಗಿ ಗಾಯಗೊಂಡಿದ್ದಾರೆ. ಸಿಡಿಲಿನ ಆರ್ಭಟದ ವೇಳೆಯಲ್ಲಿ ಕಚೇರಿಯಲ್ಲಿನ ಕಂಪ್ಯೂಟರ್ ಸ್ವಿಚ್ ಆಫ್ ಮಾಡುವ ಸಮಯದಲ್ಲೇ ಸಿಡಿಲು ಬಡಿದಿದೆ. ಅಸ್ವಸ್ಥರಾಗಿ ಕುಸಿದು ಬಿದ್ದ ಅವರನ್ನು ತಕ್ಷಣವೇ ಪುತ್ತೂರಿನ ಖಾಸಗಿ ಆಸ್ಪತ್ರೆಗೆ ಸೇರಿಸಲಾಗಿದೆ. ಸದ್ಯ ತೀವ್ರ ನಿಗಾ ಘಟಕದಲ್ಲಿ ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ.

Previous articleಉಡುಪಿಗೂ ಬಂದಿದ್ದ ಫಡ್ನವಿಸ್
Next articleರಾಜಕೀಯದಲ್ಲಿ ವೈರಿಗಳಿಲ್ಲ ಎಲ್ಲರೂ ಸ್ನೇಹಿತರೆ