ಇಳಕಲ್ : ನಗರದ ಸುಮಾರು ನಲ್ವತ್ತು ಭಾಗಗಳಲ್ಲಿ ಸಾರ್ವಜನಿಕ ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪನೆಯನ್ನು ಶನಿವಾರದಂದು ಸಮಿತಿಯ ಪದಾಧಿಕಾರಿಗಳು ಭಕ್ತಿಭಾವದಿಂದ ಮಾಡಿದರು.
ನಗರದ ಹಲವಾರು ಗಣೇಶ ಸಮಿತಿಯ ಪದಾಧಿಕಾರಿಗಳು ತಾವು ನಿಗದಿ ಪಡೆಸಿದ ಗಣೇಶ ವಿಗ್ರಹಗಳನ್ನು ಅವುಗಳು ಇದ್ದ ಸ್ಥಳದಿಂದ ಪಟಾಕಿ ಸಿಡಿಸಿ ಗುಲಾಲು ಎರಚಿಕೊಂಡು ಗಣಪತಿ ಬೊಪ್ಪಾ ಮೋರಾಯಾ ಎಂಬ ಘೋಷಣೆಯನ್ನು ಕೂಗುತ್ತಾ ತಮ್ಮ ತಮ್ಮ ಗಲ್ಲಿಗಳಲ್ಲಿ ಪ್ರತಿಷ್ಠಾಪನೆ ಮಾಡಿದರು.
ಸಾರ್ವಜನಿಕವಾಗಿ ಗಣೇಶ ಪ್ರತಿಷ್ಠಾಪನೆ ಮಾಡಿದರೂ ಈ ಬಾರಿ ಬಹುತೇಕವಾಗಿ ರಸ್ತೆ ಬದಿಗೆ ಖುಲ್ಲಾ ಸ್ಥಳಗಳಲ್ಲಿ ಕೂಡಿಸಲಾಗಿದ್ದು ಸಾರ್ವಜನಿಕರ ಸಂಚಾರಕ್ಕೆ ಅಡೆತಡೆ ಆಗದಂತೆ ನೋಡಿಕೊಂಡಿದ್ದಾರೆ.