ಸಾರಾಯಿ ಕೇಳಿದ ಗೆಳೆಯನ ಮರ್ಡರ್…

0
19
ಸಾವು

ಬಾಗಲಕೋಟೆ: ಸಾರಾಯಿ ಕೊಡಿಸುವಂತೆ ಪೀಡಿಸಿದ್ದ ಸ್ನೇಹಿತನನ್ನು ಕೊಲೆ ಮಾಡಿದ ಪ್ರಕರಣದಲ್ಲಿ ಆರೋಪಿಗೆ ಇಲ್ಲಿನ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ.
೨೦೨೨ರಲ್ಲಿ ಬೀಳಗಿ ಪೊಲೀಸ್ ಠಾಣಾ ವ್ಯಾಪ್ತಿಯ ಬಾಡಗಂಡಿ ಗ್ರಾಮದ ಸರಹದ್ದಿನಲ್ಲಿರುವ ಮೋದಿ ಪ್ಲಾಟ್‌ನಲ್ಲಿ ಈ ಘಟನೆ ನಡೆದಿತ್ತು. ಪ್ರಕರಣದ ವಿಚಾರಣೆ ನಡೆಸಿದ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಎನ್.ವಿ.ವಿಜಯ ಅವರು, ಅಭಿಯೋಗದ ಪರ ಸಲ್ಲಿಸಿದ ಸಾಕ್ಷಿ, ಪುರಾವೆಗಳನ್ನು ಅವಲೋಕಿಸಿ ಆರೋಪಿಗೆ ಐಪಿಸಿ ಸೆಕ್ಷನ್ ೩೦೨ರ ಅಡಿಯಲ್ಲಿ ಜೀವಾವಧಿ ಶಿಕ್ಷೆ ಮತ್ತು ೫ ಸಾವಿರ ರೂ.ಗಳ ದಂಡ ವಿಧಿಸಿ ಆದೇಶಿಸಿದ್ದಾರೆ. ಸರ್ಕಾರದ ಪರವಾಗಿ ಪ್ರಧಾನ ಸರ್ಕಾರಿ ಅಭಿಯೋಜಕ ವಿ.ಜಿ.ಹೆಬಸೂರ ಅವರು ವಾದ ಮಂಡಿಸಿದ್ದರು.

Previous articleವಿವಿಧ ಬೇಡಿಕೆ ಈಡೇರಿಕೆಗೆ ಎಡಿಸಿಗೆ ವಾಲ್ಮೀಕಿ ಸಮಾಜದ ಮನವಿ
Next articleಸ್ಮಶಾನಕ್ಕೆ ನುಗ್ಗಿದ ನೀರು ಪುರಸಭೆ ಆಡಳಿತಾಧಿಕಾರಿ ಸಜ್ಜನ ಭೇಟಿ