ಸನ್ಸೇರಾ ಕಂಪನಿಯಿಂದ ₹2,100 ಕೋಟಿ ಹೂಡಿಕೆ, ಒಡಂಬಡಿಕೆಗೆ ಸಹಿ
ಬೆಂಗಳೂರು: ಸನ್ಸೇರಾ ಕಂಪನಿಯಿಂದ ₹2,100 ಕೋಟಿ ಹೂಡಿಕೆ, ಒಡಂಬಡಿಕೆಗೆ ಸಹಿ ಹಾಕಿದ್ದು 3,500 ಉದ್ಯೋಗಗಳನ್ನು ಸೃಷ್ಟಿಸಲಿದೆ ಎಂದು ಸಚಿವ ಎಂ. ಬಿ. ಪಾಟೀಲ ತಿಳಿಸಿದ್ದಾರೆ.
ಈ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದು ವಾಹನಗಳ ಮತ್ತು ವೈಮಾನಿಕ ಬಿಡಿಭಾಗಗಳನ್ನು ತಯಾರಿಸುವ #SanseraEngineering ಕಂಪನಿಯು ರಾಜ್ಯದಲ್ಲಿ ₹2,100 ಕೋಟಿ ಹೂಡಿಕೆ ಮಾಡಲಿದೆ. ಈ ಸಂಬಂಧ ಖನಿಜ ಭವನದಲ್ಲಿ ಈದಿನ ಕೈಗಾರಿಕಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ಎಸ್ ಸೆಲ್ವಕುಮಾರ್ ಮತ್ತು ಸೆನ್ಸೇರಾ ಕಂಪನಿಯ ಸಿಇಒ ಶೇಖರ್ ವಾಸನ್ ಒಡಂಬಡಿಕೆಗೆ ಸಹಿ ಹಾಕಿದರು. ಕಂಪೆನಿಯು ರಾಮನಗರ ಜಿಲ್ಲೆ ಹಾರೋಹಳ್ಳಿ ಕೈಗಾರಿಕಾ ಪ್ರದೇಶದಲ್ಲಿ ತನ್ನ ಉತ್ಪಾದನಾ ಘಟಕ ಆರಂಭಿಸಿ ಸುಮಾರು 3,500 ಉದ್ಯೋಗಗಳನ್ನು ಸೃಷ್ಟಿಸಲಿದೆ. ಉದ್ಯಮ-ಸ್ನೇಹಿ ವಾತಾವರಣ, ಸುಲಲಿತ ವ್ಯವಹಾರ ಪಾಲಿಸಿಗಳಿಂದ ನಮ್ಮ ರಾಜ್ಯ ಉದ್ಯಮಿಗಳ ನೆಚ್ಚಿನ ತಾಣವಾಗಿದೆ ಎಂದಿದ್ದಾರೆ.