ಧಾರವಾಡ : ಸತತ ಮಳೆಗೆ ಜಿಲ್ಲೆಯಲ್ಲಿ ವಿವಿಧ ಕಡೆ ಮನೆಗಳು ಬೀಳುತ್ತಿವೆ. ಆದರೆ, ಈವರೆಗೆ ಅವಘಡ ಸಂಭವಿಸಿರಲಿಲ್ಲ.
ಆದರೆ, ಶುಕ್ರವಾರ ರಾತ್ರಿ
ತಾಲೂಕಿನ ವೆಂಕಟಾಪುರ ಗ್ರಾಮದಲ್ಲಿ ಮನೆ ಕುಸಿದು ಓರ್ವ ವ್ಯಕ್ತಿ ಮೃತಪಟ್ಟಿದ್ದು, ಇನ್ನಿಬ್ಬರು ಗಾಯಗೊಂಡಿದ್ದಾರೆ.
ಯಲ್ಲಪ್ಪ ಇಟ್ಟಿ ಮೃತಪಟ್ಟ ವ್ಯಕ್ತಿ. ಮನೆ ಕುಸಿದು ಬಿದ್ದ ವೇಳೆ ಯಲ್ಲಪ್ಪ ತೀವ್ರ ಗಾಯಗೊಂಡಿದ್ದರು. ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾರೆ.
ಯಲ್ಲಪ್ಪ ಅವರ ಪತ್ನಿ ಹನುಮವ್ವ, ಪುತ್ರಿ ಯಲ್ಲವ್ವ ತೀವ್ರವಾಗಿ ಗಾಯಗೊಂಡಿದ್ದಾರೆ.