ಬಳ್ಳಾರಿ: ಸಂಡೂರು ಉಪಚುನಾವಣೆ ಅಖಾಡ ತೀವ್ರ ರಂಗು ಪಡೆದಿದ್ದು, ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಸಂಡೂರು ಕ್ಷೇತ್ರಕ್ಕೆ ಮಂಗಳವಾರ ಎಂಟ್ರಿ ಕೊಟ್ಟಿದ್ದಾರೆ.
ಬೆಂಗಳೂರಿನಿಂದ ಜಿಂದಾಲ್ ಏರ್ ಪೋಟ್೯ಗೆ ಆಗಮಿಸಿದರು. ಜಿಂದಾಲ್‌ನಲ್ಲಿ ಶಾಸಕರ ಸಭೆ ನಡೆಸಿದ ಡಿ. ಕೆ. ಶಿವಕುಮಾರ್ ಒಗ್ಗಟ್ಟಿನಿಂದ ಚುನಾವಣೆ ಎದುರಿಸಿ ಎಂದು ಕರೆ ನೀಡಿದರು. ಬಳಿಕ ಸಂಡೂರು ಕ್ಷೇತ್ರದ ತಿಮ್ಲಾಪೂರ ಗ್ರಾಮಕ್ಕೆ ಆಗಮಿಸಿ ಮತಯಾಚನೆ ಮಾಡಿದರು.
ಸಚಿವ ಸಂತೋಷ ಲಾಡ್, ಶಾಸಕರಾದ ಬಿ.ನಾಗೇಂದ್ರ, ಜೆನ್ ಗಣೇಶ, ಸಂಸದ ಬಿ.ತುಕಾರಾಂ, ಅಲ್ಲಂ ವೀರಭದ್ರಪ್ಪ, ಅಭ್ಯರ್ಥಿ ಅನ್ನಪೂರ್ಣ ತುಕಾರಂ, ವಿಎಸ್ ಉಗ್ರಪ್ಪ ಸೇರಿ ಇತರರು ಇದ್ದರು.