ಸುದೀಪ್ ಅಳಿಯನಿಗೆ ನಾಯಕಿ ಫಿಕ್ಸ್
ಸುದೀಪ್ ಅಕ್ಕನ ಮಗ ಜ್ಯೂ. ಸಂಚಿತ್ ಸಂಜೀವ್ ನಾಯಕನಾಗಿ ನಟಿಸುತ್ತಿರುವ ಹೊಸ ಸಿನಿಮಾ ಇತ್ತೀಚೆಗಷ್ಟೇ ಅಧಿಕೃತವಾಗಿ ಅನೌನ್ಸ್ ಆಗಿತ್ತು. ಕಿಚ್ಚ ಸುದೀಪ್ ಪತ್ನಿ ಪ್ರಿಯಾ ಒಡೆತನದ ಸುಪ್ರಿಯಾನ್ವಿ ಪ್ರೊಡಕ್ಷನ್ ಮತ್ತು ಕಾರ್ತಿಕ್-ಯೋಗಿಯ ಕೆ.ಆರ್.ಜಿ ಪ್ರೊಡಕ್ಷನ್ಸ್ ಜಂಟಿಯಾಗಿ ನಿರ್ಮಾಣ ಮಾಡುತ್ತಿರುವ ಸಿನಿಮಾ ಇದಾಗಿದೆ. ಜನವರಿ 24ರಂದು ಮುಹೂರ್ತ ಆಚರಿಸಿಕೊಳ್ಳಲಿರುವ ಈ ಸಿನಿಮಾಕ್ಕೆ ನಾಯಕಿಯನ್ನು
ನಿಕ್ಕಿ ಮಾಡಲಾಗಿದೆ.
ಸಂಚಿತ್ ಜೋಡಿಯಾಗಿ ಕಾಜಲ್ ಕುಂದರ್ ಕಾಣಿಸಿಕೊಳ್ಳುತ್ತಿದ್ದಾರೆ. ಕನ್ನಡದ ಪೆಪೆ, ಕೆಟಿಎಂ, ಬಾಂಡ್ ರವಿ ಮೊದಲಾದ ಸಿನಿಮಾಗಳಲ್ಲಿ ನಟಿಸಿದ್ದ ಕಾಜಲ್ ಕುಂದರ್, ಇದೀಗ ಸಂಚಿತ್ ಜತೆ ಹೆಜ್ಜೆ ಹಾಕಲಿದ್ದಾರೆ.
ಈ ಸಿನಿಮಾಗೆ ವಿವೇಕ್ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಇದು ನಿರ್ದೇಶಕರ ಚೊಚ್ಚಲ ಸಿನಿಮಾ. ಈ ಮೊದಲು ತೆಲುಗು, ತಮಿಳು ಹಾಗೂ ಹಿಂದಿ ಸಿನಿಮಾಗಳಲ್ಲಿ ಕೆಲಸ ಮಾಡಿರುವ ಅನುಭವ ಹೊಂದಿರುವ ವಿವೇಕ್, ಈಗ ಸ್ವತಂತ್ರ ನಿರ್ದೇಶಕನಾಗಿ ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಡುತ್ತಿದ್ದಾರೆ.
ಕ್ರೈಂ-ಥ್ರಿಲ್ಲರ್ ಕಥಾಹಂದರ ಹೊಂದಿರುವ ಈ ಸಿನಿಮಾದ ಫಸ್ಟ್‌ಲುಕ್ ಮತ್ತು ಟೈಟಲ್ ಜನವರಿ 24ರಂದು ಲಾಂಚ್ ಆಗಲಿದೆ.