Home Advertisement
Home ತಾಜಾ ಸುದ್ದಿ ಶ್ರೀರಾಮಸೇನೆಯಿಂದ 1 ಸಾವಿರ ಮಹಿಳೆಯರಿಗೆ ತ್ರಿಶೂಲ ದೀಕ್ಷೆ

ಶ್ರೀರಾಮಸೇನೆಯಿಂದ 1 ಸಾವಿರ ಮಹಿಳೆಯರಿಗೆ ತ್ರಿಶೂಲ ದೀಕ್ಷೆ

0
116

ಹುಬ್ಬಳ್ಳಿ: ವಿದ್ಯಾರ್ಥಿನಿ ನೇಹಾ ಹಿರೇಮಠ ಹತ್ಯೆಯಾಗಿ ಏ. ೧೮ಕ್ಕೆ ಒಂದು ವರ್ಷ ಆಗುತ್ತದೆ. ಅಂದು ಶ್ರೀರಾಮಸೇನೆಯಿಂದ ಒಂದು ಸಾವಿರ ಮಹಿಳೆಯರಿಗೆ ತ್ರಿಶೂಲ ದೀಕ್ಷೆ ನೀಡಲಾಗುವುದು ಎಂದು ಶ್ರೀರಾಮಸೇನೆ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ವಿವಾಧಾತ್ಮಕ ಹೇಳಿಕೆ ನೀಡಿದ್ದಾರೆ.
ಕೆಎಂಸಿಆರ್‌ಐ ಆವರಣದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ನೇಹಾ ಹಿರೇಮಠ ಹತ್ಯೆಯಾಗಿ ಒಂದು ವರ್ಷದೊಳಗೆ ಸಾಕಷ್ಟು ಇಂತಹ ಪ್ರಕರಣ ಮರುಕಳಿಸುತ್ತಿವೆ. ಕಾಂಗ್ರೆಸ್ ಸರಕಾರ ದಿಟ್ಟ ನಿರ್ಧಾರ ಕೈಗೊಳ್ಳದ ಪರಿಣಾಮ, ಪೊಲೀಸರು ಎನ್‌ಕೌಂಟರ್‌ನಂತಹ ತೀರ್ಮಾನ ಕೈಗೊಳ್ಳದ ಕಾರಣ ಪದೇ ಪದೇ ಇಂತಹ ಘಟನೆ ನಡೆಯುತ್ತಿವೆ. ಹೀಗಾಗಿ ಏ. ೧೮ಕ್ಕೆ ಒಂದು ವರ್ಷ ಆಗುತ್ತದೆ. ಶ್ರೀರಾಮಸೇನೆ ೧ ಸಾವಿರ ಮಹಿಳೆಯರಿಗೆ ತ್ರಿಶೂಲ ದಿಕ್ಷೆ ನೀಡಲಿದೆ. ಮಹಿಳೆಯರು ತಮ್ಮ ಬ್ಯಾಗ್‌ನಲ್ಲಿ ಈ ತ್ರಿಶೂಲ ಇಟ್ಟುಕೊಳ್ಳಲಿ ಇಂತಹವರು ಯಾರಾದ್ರು ಬಂದ್ರೆ ಚುಚ್ಚಲಿ. ಅತ್ಯಾಚಾರಿಗಳು, ಕೊಲೆಗಡುಕರು, ಲವ್ ಜಿಹಾದ್ ಮಾಡುವವರಿಗೆ ಚುಚ್ಚಲಿ ಎಂದರಲ್ಲದೆ, ಕಾಂಗ್ರೆಸ್ ಮಹಿಳೆಯರ ರಕ್ಷಣೆ ಮಾಡಲ್ಲ. ಕಾಂಗ್ರೆಸ್ ಇರುವುದು ಮುಸ್ಲಿಂರ ರಕ್ಷಣೆಗಾಗಿ, ಅವರ ವೋಟ್‌ಗಾಗಿ ಜೋಲ್ಲು ಸುರಿಸುತ್ತಾರೆ ಎಂದರು.

Previous article3ನೇ ಸ್ಥಾನಕ್ಕೇರಿದ ಮೈಸೂರು ಸ್ಯಾಂಡಲ್
Next articleಪಾರ್ಟಿಗೆ ಕರೆದು ಗೆಳೆಯನ ಕೊಂದವ ಅಂದರ್