ಶೀಘ್ರದಲ್ಲೇ ಬೇಗಂ ತಲಾಬ್ ಕೆರೆ ಉದ್ಘಾಟನೆ

ಪುನರ್ ನವೀಕೃತ ಬೇಗಂತಲಾಬ್ ಕೆರೆ ಉದ್ಘಾಟನೆಗೆ ಸಜ್ಜು!

ಬೆಂಗಳೂರು: ವಿಜಯಪುರ ನಗರದ ಹೊರವಲಯದಲ್ಲಿರುವ 234 ಎಕರೆ ವಿಶಾಲವಾದ ಐತಿಹಾಸಿಕ ಬೇಗಂ ತಾಲಾಬ್ ಕೆರೆ ಅಭಿವೃದ್ಧಿ ಮಾಡಿ ಅದರ ಪಕ್ಕದಲ್ಲಿ ಸುಂದರ ಉದ್ಯಾನವನ ಮಾಡಲಾಗಿದ್ದು ಉದ್ಘಾಟನೆಗೆ ಸಜ್ಜಾಗಿದೆ.
ಈ ಕುರಿತಂತೆ ಸಚಿವ ಎಂ ಬಿ ಪಾಟೀಲ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿದ್ದು ಶತಮಾನಗಳ ಇತಿಹಾಸವಿರುವ ವಿಜಯಪುರದ ಹೆಮ್ಮೆಯ #ಬೇಗಂತಲಾಬ್ ಕೆರೆ ಹಾಗೂ ಕೆರೆ ಅಂಗಳದ ಉದ್ಯಾನವನಕ್ಕೆ ಹೊಸ ಮೆರಗು ನೀಡುತ್ತಿದ್ದೇವೆ. ಈ ಹಿಂದೆ ಜಲಸಂಪನ್ಮೂಲ ಖಾತೆ ಸಚಿವನಾಗಿದ್ದಾಗ ಸಾಕಷ್ಟು ಅಭಿವೃದ್ಧಿ ಪಡಿಸಲಾಗಿತ್ತು. #ನಮ್ಮಸರಕಾರ ದ ಈ ಅವಧಿಯಲ್ಲಿ ಮತ್ತಷ್ಟು ಅಭಿವೃದ್ಧಿ ಪಡಿಸಿ, ಆಕರ್ಷಕ ಪ್ರವಾಸಿ ತಾಣವನ್ನಾಗಿ ರೂಪಿಸಲು ಕೈಗೊಂಡ ಸೌಂದರ್ಯೀಕರಣದ ಕ್ರಮಗಳು ಮುಕ್ತಾಯದ ಹಂತ ತಲುಪಿದ್ದು, ಶೀಘ್ರದಲ್ಲೇ ಸಾರ್ವಜನಿಕರ ಬಳಕೆಗೆ ಲಭ್ಯವಾಗಲಿದೆ, ಜಲ, ವೃಕ್ಷ, ಶಿಕ್ಷಣದೆಡೆಗೆ ನಮ್ಮ ಪಯಣ ನಿರಂತರವಾಗಿ ಮುಂದುವರೆಯಲಿದೆ…ಎಂದಿದ್ದಾರೆ

ಈ ಐತಿಹಾಸಿಕ ಬೇಗಂ ತಲಾಬ್ ಕೆರೆಗೆ 2018 ರಲ್ಲಿ ಅಂದಿನ ಸಿಎಂ ಆಗಿದ್ದ ಸಿದ್ದರಾಮಯ್ಯನವರು ಅಡಿಗಲ್ಲನ್ನು ಹಾಕಿದ್ದರು. ಕೆರೆಗೆ ಆಲಮಟ್ಟಿ ಜಲಾಶಯದಿಂದ ನೀರು ಬಿಡಲಾಗಿತ್ತು. ಇದು ಅಂತರ್ಜಲ್ ವೃದ್ಧಿಗೆ ಸಾಕಷ್ಟು ಅನುಕೂಲ. ಅಲ್ಲದೆ ಬೇಗಂ ತಲಾಬ್ ಕೆರೆಯ ಪಕ್ಕದಲ್ಲಿ ಸುಂದರವಾದ ಉದ್ಯಾನವನ ನಿರ್ಮಾಣ ಮಾಡಲಾಗಿದೆ.