ದಾವಣಗೆರೆ: ಚನ್ನಗಿರಿ ಶಾಸಕ ಶಿವಗಂಗಾ ಬಸವರಾಜ್ ಒಬ್ಬ ಮಾನಸಿಕ ಅಸ್ವಸ್ಥ ಎಂದು ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ವಾಗ್ದಾಳಿ ನಡೆಸಿದ್ದಾರೆ.
ತಮ್ಮ ವಿರುದ್ಧ ಸಿಎಂ, ಡಿಸಿಎಂಗೆ ಪತ್ರ ಬರೆದು ದೂರು ನೀಡಿದ್ದ ಶಾಸಕ ಶಿವಗಂಗಾ ಬಸವರಾಜ್ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಮಲ್ಲಿಕಾರ್ಜುನ್, ಶಿವಗಂಗಾ ಬಸವರಾಜ್ ಒಬ್ಬ ಮಾನಸಿಕ ಅಸ್ವಸ್ಥ ಅವನೇ ಸರಿ ಇಲ್ಲ. ಮೊದಲು ಅವರ ಸಹೋದರರ ನಡುವೆ ಇರುವ ಸಮಸ್ಯೆಯನ್ನೇ ಬಗೆಹರಿಸಿಕೊಳ್ಳಲಿ. ನಂತರ ನಮ್ಮ ಬಗ್ಗೆ ಮಾತಾಡಲಿ ಎಂದು ತಿರುಗೇಟು ನೀಡಿದರು.
ಶಿವಗಂಗಾ ಬಸವರಾಜ್ ಸಹೋದರ ಶಿವಗಂಗಾ ಶ್ರೀನಿವಾಸ್ ಅವರ ಒತ್ತಾಯಕ್ಕೆ ಮಣಿದು ಮಹಾನಗರ ಪಾಲಿಕೆ ಕಾರ್ಪೊರೇಷನ್‌ಗೆ ಟಿಕೆಟ್ ಕೊಡಿಸಿ ಗೆಲ್ಲಿಸಿದ್ದೆವು. ಈಗ ಅವರ ಸಹೋದರ ಮೇಲೆಯೇ ಸೆಡ್ಡು ಹೊಡಿಯುತ್ತಿದ್ದಾನೆ ಎಂದು ಹರಿಹಾಯ್ದರು.