ವೀಣಾ ಕಾಶಪ್ಪನವರ ಕುರಿತು ಸಾಮಾಜಿಕ ಜಾಲತಾಣದಲ್ಲಿ ಅವಮಾನಕಾರಿ ಪೋಸ್ಟ್: ಪ್ರಕರಣ ದಾಖಲು

0
9


ಇಳಕಲ್: ಬಾಗಲಕೋಟೆ ಲೋಕಸಭಾ ಚುನಾವಣೆ ಕಾಂಗ್ರೆಸ್ ಟಿಕೇಟ್ ವಂಚಿತೆ ವೀಣಾ ಕಾಶಪ್ಪನವರ ಮೇಲೆ ಸಾಮಾಜಿಕ ಜಾಲತಾಣದಲ್ಲಿ ಅವಮಾನಕಾರಿ ಪೋಸ್ಟ್ ಬಿಟ್ಟ ವ್ಯಕ್ತಿಗಳ ಮೇಲೆ ಪೋಲಿಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
   ವೀಣಾ ಪೌಡರ್ ಎಂಬ ಉತ್ಪಾದನೆ ಮಾರುಕಟ್ಟೆಯಲ್ಲಿ ಲಭ್ಯವಿದ್ದು ಇದನ್ನು ಹಚ್ಚಿಕೊಂಡರೆ ಕಣ್ಣೀರು ತಾನೇ ತಾನಾಗಿ ಬರುತ್ತದೆ ಎಂಬ ಅರ್ಥದ ಪೋಸ್ಟ್ ಬಿಟ್ಟಿದ್ದರಿಂದ ಇದರಿಂದ ಕಾಂಗ್ರೆಸ್ ಮತ್ತು ಬಿಜೆಪಿ ಕಾರ್ಯಕರ್ತರ ಮಧ್ಯ ವಾಗ್ವಾದ ನಡೆಯಬಹುದು ಎಂದು ಪೋಲಿಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಇಳಕಲ್ ಶಹರ್ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪಿಎಸ್‌ಐ ಸೋಮೇಶ ಗೆಜ್ಜಿ ತನಿಖೆ ನಡೆಸಿದ್ದಾರೆ.

Previous article35 ಸೊಮಾಲಿ ಕಡಲ್ಗಳ್ಳರು ಮುಂಬೈ ಪೊಲೀಸರಿಗೆ ಹಸ್ತಾಂತರ
Next articleಮಂಡ್ಯ ಕ್ಷೇತ್ರ ಜೆಡಿಎಸ್‌ಗೆ