ಜ್ಞಾನೇಂದ್ರ ಅವರು 15ನೇ ಬಾರಿ ಬೆಂಗಳೂರು ಕರಗ ಹೊರುತ್ತಿದ್ದಾರೆ.
ಬೆಂಗಳೂರು: ವಿಶ್ವವಿಖ್ಯಾತ ಬೆಂಗಳೂರು ಕರಗ ಮಹೋತ್ಸವಕ್ಕೆ ಡೇಟ್ ಫಿಕ್ಸ್ ಆಗಿದೆ.
ಏಪ್ರಿಲ್ ತಿಂಗಳಲ್ಲಿ ಬರುವ ಚೈತ್ರ ಪೌರ್ಣಮಿಯಂದು ಕರಗ ಶಕ್ತ್ಯೋತ್ಸವ ನಡೆಯಲಿದೆ. ಅದರಂತೆ ಏಪ್ರಿಲ್ 12ರಂದು ಕರಗ ಶಕ್ತ್ಯೋತ್ಸವ ದಿನಾಂಕ ನಿಗದಿಯಾಗಿದೆ. ಏಪ್ರಿಲ್ 4ರಿಂದ 14ರವರೆಗೆ ಬೆಂಗಳೂರು ಕರಗ ಮಹೋತ್ಸವದ ಧಾರ್ಮಿಕ ಆಚರಣೆಗಳು ನಡೆಯಲಿವೆ.
ಕರಗ ಮಹೋತ್ಸವದಲ್ಲಿ ಈ ಬಾರಿಯೂ ಕೂಡ ಪೂಜಾರಿ ಎ.ಜ್ಞಾನೇಂದ್ರ ಕರಗವನ್ನು ಹೊರಲಿದ್ದಾರೆ. ಈಗಾಗಲೇ ಸತತವಾಗಿ ಕಳೆದ 14 ವರ್ಷಗಳಿಂದ ಕರಗವನ್ನು ಹೊತ್ತಿರುವ ಎ.ಜ್ಞಾನೇಂದ್ರ. 15ನೇ ಭಾರಿ ಕರಗ ಹೊರಲು ಆಯ್ಕೆಯಾಗಿದ್ದಾರೆ. ಜ.27ರಂದು ನಡೆದ ಸಭೆಯಲ್ಲಿ ಇವರನ್ನು ಕರಗ ಹೊರಲು ಆಯ್ಕೆ ಮಾಡಿದ್ದಾರೆ ಎಂದು ತಿಳಿದು ಬಂದಿದೆ. ಸಭೆಯಲ್ಲಿ ಮುಜರಾಯಿ ಇಲಾಖೆಯ ಕಾರ್ಯನಿರ್ವಾಹಣಾಧಿಕಾರಿ ನವೀನ್, ಧರ್ಮರಾಯ ಸ್ವಾಮಿ ದೇವಾಲಯದ ಆಡಳಿತ ಮಂಡಳಿಯ ಅಧ್ಯಕ್ಷ ಸತೀಶ್, ಖಜಾಂಚಿ ಜಿ.ಬಾಲಕೃಷ್ಣ, ವ್ಯವಸ್ಥಾಪನಾ ಸಮಿತಿ ಸದಸ್ಯ ಅಮರನಾರಾಯಣ್ ಸಭೆ ನಡೆಸಿ ದಿನಾಂಕ ಹಾಗೂ ಕರಗ ಹೊರುವವರನ್ನು ಆಯ್ಕೆ ಮಾಡಿದ್ದಾರೆ. ಇನ್ನು ಸತತ 15ನೇ ಬಾರಿ ಕರಗ ಹೊರುತ್ತಿರುವ ಕರಗದ ಪೂಜಾರಿ ಎ. ಜ್ಞಾನೇಂದ್ರರಿಗೆ ಇದು ಕೊನೆಯ ಕರಗ ಶಕ್ತ್ಯೋತ್ಸವ ಆಗಿದೆ.