ವಿವಿ ಪ್ರಾಧ್ಯಾಪಕರ ವೃತ್ತಿ ಸಾರ್ವಜನಿಕ ಹುದ್ದೆ ಅಲ್ಲ

0
43

ಬೆಂಗಳೂರು: ವಿಶ್ವವಿದ್ಯಾಲಯದೊಂದಿಗೆ ಕಾನೂನಾತ್ಮಕವಾಗಿ ಮಾತ್ರ ಸಂಬಂಧ ಹೊಂದಿರುವ ಪ್ರಾಧ್ಯಾಪಕರು, ಸಹ ಪ್ರಾಧ್ಯಾಪಕರ ವೃತ್ತಿ ಸ್ವರೂಪವು ಸಾರ್ವಜನಿಕ ಹುದ್ದೆಯನ್ನಾಗಿ ಪರಿಗಣಿಸಲಾಗುವುದಿಲ್ಲ ಎಂದು ಹೈಕೋರ್ಟ್ ಅಭಿಪ್ರಾಯ ಪಟ್ಟಿದೆ.
ಬೆಂಗಳೂರು ವಿಶ್ವವಿದ್ಯಾಲಯದ ಜೀವ ವಿಜ್ಞಾನ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ. ಎಂ. ಶಿವಶಂಕರ್ ಅವರನ್ನು ಆ ಹುದ್ದೆಯಿಂದ ತೆರವು ಮಾಡುವಂತೆ ಕೋರಿ(ಕೋ-ವಾರೆಂಟೋ) ಹೆಚ್. ಟಿ. ಉಮೇಶ್, ಡಾ. ಎಸ್. ಆನಂದ್, ಡಾ. ಹೆಚ್. ಪಿ. ಪುಟ್ಟರಾಜು ಎಂಬುವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎನ್. ವಿ. ಅಂಜಾರಿಯಾ ಮತ್ತು ನ್ಯಾಯಮೂರ್ತಿ ಎಂ. ಐ. ಅರುಣ್ ಅವರಿದ್ದ ನ್ಯಾಯಪೀಠ ಈ ಆದೇಶ ನೀಡಿದೆ.
ಅರ್ಜಿಯಲ್ಲಿ ಪ್ರತಿವಾದಿಯಾಗಿರುವ ಡಾ. ಶಿವಶಂಕರ್ ಅವರು ಬೆಂಗಳೂರು ವಿವಿಗೆ ೨೦೦೩ರಲ್ಲಿ ರೇಷ್ಮೆ ವಿಭಾಗದಲ್ಲಿ ಪ್ರಾಧ್ಯಾಪಕರಾಗಿ ನೇಮಕಗೊಂಡಿದ್ದರು. ಅವರನ್ನು ಆ ಹುದ್ದೆಯಿಂದ ತೆರವುಗೊಳಿಸಬೇಕು ಎಂಬುದಾಗಿ ಕೋರಿರುವುದು ದುರುದ್ದೇಶ ಪೂರ್ವಕವಾಗಿದೆ ಎಂದು ಅಭಿಪ್ರಾಯಪಟ್ಟ ನ್ಯಾಯಪೀಠ ೭೫೦೦ ರೂ ಗಳ ದಂಡ ವಿಧಿಸಿ ಆದೇಶಿಸಿದೆ.

Previous articleಬ್ರಾಹ್ಮಣ ಮಹಾಸಭೆ ಚುನಾವಣೆಗೆ ಭಾರೀ ಪೈಪೋಟಿ
Next articleರಾಜ್ಯದ ಎಲ್ಲ ಜಿಲ್ಲೆಗಳಲ್ಲೂ‌ ವಾರ ಕಾಲ ಮಳೆ ಸಾಧ್ಯತೆ