ದಾವಣಗೆರೆ: ಬಿಜೆಪಿ ವರಿಷ್ಟರ ಮುಂದೆ ಎಲ್ಲವನ್ನೂ ಹೇಳಿದ್ದೇವೆ. ಈಗ ಮತ್ತೆ ಪರ, ವಿರೋಧ ಚರ್ಚೆಗಳೇ ಬೇಡ. ಅದರ ಬಗ್ಗೆ ನಾವು ಏನನ್ನೂ ಹೇಳುವುದಿಲ್ಲ ಎನ್ನುವ ಮೂಲಕ ಬಿಜೆಪಿ ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ವಿಜಯಪುರ ಸಂಸದ ಬಸನಗೌಡ ಪಾಟೀಲ್ ಯತ್ನಾಳ್ ಬಗ್ಗೆ ಮಾತನಾಡಲು ನಿರಾಕರಿಸಿದರು.
ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗಾ ಗಲೇ ನಮ್ಮ ರಾಷ್ಟ್ರೀಯ ನಾಯಕರ ಮುಂದೆ ಏನು ಹೇಳಬೇಕೋ ಹೇಳಿದ್ದಾ ಗಿದೆ. ಈ ಬಗ್ಗೆ ನಾವು ಮತ್ತೆ ಏನನ್ನೂ ಹೇಳುವುದಿಲ್ಲ. ಪರ-ವಿರೋಧ ಚರ್ಚೆಗಳೂ ಬೇಡ. ನಮ್ಮ ರಾಜ್ಯ, ರಾಷ್ಟ್ರೀಯ ನಾಯಕರಿಗೆ ಮುಜುಗರ ವನ್ನುಂಟು ಮಾಡುವ ಕೆಲಸ ಮಾಡುವುದಿಲ್ಲ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.
ಪಕ್ಷದ ರಾಜ್ಯಾಧ್ಯಕ್ಷರನ್ನಾಗಿ ಮಾಡಿದ್ದು ನಾವ್ಯಾರೂ ಅಲ್ಲ. ಯಾರೆಲ್ಲಾ ಧಾರಾ ವಾಹಿ ತರಹ ಮಾತನಾಡುವವರಿಗೆ ರಾಜ್ಯ ಉಸ್ತುವಾರಿಗಳು, ರಾಜ್ಯಾಧ್ಯಕ್ಷರು ಸ್ಪಷ್ಟ ಉತ್ತರ ನೀಡಿದ್ದಾರೆ. ಪರ, ವಿರೋಧ ಹೇಳಿಕೆ ಬರದಂತೆ ಸೂಚಿಸಿದ್ದಾರೆ. ಮಾಧ್ಯಮಗಳ ಮುಂದೆ ನಾನು ಯಾವುದನ್ನೂ ಬಹಿರಂಗವಾಗಿ ಹೇಳುವು ದಿಲ್ಲ. ಪರ ಮಾತನಾಡಿದರೆ, ತಪ್ಪು ಸಂದೇಶ ಹೋಗುತ್ತದೆ. ರಾಜ್ಯಾಧ್ಯಕ್ಷರು, ರಾಷ್ಟ್ರೀಯ ನಾಯಕರಿಗೆ ಮುಜುಗರವಾಗಬಾರದು. ಹಾಗಾಗಿ ನಾವ್ಯಾವುದೂ ಪ್ರತಿಕ್ರಿಯೆ ನೀಡಲ್ಲ ಎಂದು ರೇಣುಕಾಚಾರ್ಯ ಸ್ಪಷ್ಟಪಡಿಸಿದರು.
ಇನ್ನು ರಾಜ್ಯಾದ್ಯಂತ ಶಿಶು, ಬಾಣಂತಿಯರ ಸಾವು ನಿರಂತರವಾಗಿದೆ. ಕಳಪೆ ಔಷಧ ನೀಡಿ, ಮಕ್ಕಳ ಸಾವಿಗೆ ಕಾರಣರಾದ ವೈದ್ಯಕೀಯ ಶಿಕ್ಷಣ ಸಚಿವ ಶರಣ ಪ್ರಕಾಶ್ ಪಾಟೀಲ್, ವೈದ್ಯಕೀಯ ಸಚಿವ ದಿನೇಶ್ ಗುಂಡುರಾವ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಆಗ್ರಹಿಸಿದರು.