ಕಂಡಕಂಡದೆಲ್ಲಾ ವಕ್ಫ್ ಆಸ್ತಿ. ರಾತ್ರೋರಾತ್ರಿ ಎಲ್ಲವೂ ವಕ್ಫ್ ಭೂಮಿ
ನವದೆಹಲಿ: ವಕ್ಫ್‌ನಿಂದ ಕರ್ನಾಟಕದಲ್ಲಿ ನಡೆಯುತ್ತಿರುವ ಅಕ್ರಮಗಳ ಕುರಿತು ಕೇಂದ್ರ ಗೃಹ ಸಚಿವ ಅಮಿತ್ ಶಾ ಬಹಿರಂಗ ಪಡಿಸಿದ್ದಾರೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹೇಳಿದ್ದಾರೆ.
ಈ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿ ಕಂಡಕಂಡದೆಲ್ಲಾ ವಕ್ಫ್ ಆಸ್ತಿ. ರಾತ್ರೋರಾತ್ರಿ ಎಲ್ಲವೂ ವಕ್ಫ್ ಭೂಮಿ, ಧಾರ್ಮಿಕ ಕೇಂದ್ರಗಳು ವಕ್ಫ್ ಆಸ್ತಿ, ಕೋಟಿ ಕೋಟಿ ಬೆಲೆ ಬಾಳೊ ಭೂಮಿ ಖಾಸಗಿಯವರಿಗೆ ಕಡಿಮೆ ಬಾಡಿಗೆಗೆ, ರೈತರು ಭೂಮಿ ಕಳೆದುಕೊಳ್ಳುವ ಸ್ಥಿತಿ, ಕೋಟಿ ಕೋಟಿ ಹಣ ತೆಗೆದುಕೊಂಡಿದ್ರು ಅದನ್ನ ಪ್ರಶ್ನಿಸುವಂತಿಲ್ಲ.
ಕೇಂದ್ರ ಗೃಹ ಸಚಿವ ಅಮಿತ್ ಶಾ ಸದನದಲ್ಲಿ ವಕ್ಫ್ ನಿಂದ ಕರ್ನಾಟಕದಲ್ಲಿ ನಡೆಯುತ್ತಿರುವ ಅಕ್ರಮಗಳ ಕುರಿತು ಬಹಿರಂಗ ಪಡಿಸಿದ್ದಾರೆ. ಕರ್ನಾಟಕದ ದತ್ತಪೀಠ ಭೂಮಿಯನ್ನೂ ಅತಿಕ್ರಮಿಸಿಕೊಳ್ಳಲಾಗಿದೆ. ಅದೇ ರೀತಿ ಇತರೆ ಧರ್ಮೀಯರ ಭೂಮಿಯನ್ನು ಸಹ ವಕ್ಫ್‌ನಿಂದ ಕಬಳಿಕೆಯಾಗಿದೆ.
ಅಲ್ಪಸಂಖ್ಯಾತರ ಕಲ್ಯಾಣವೂ ಆಗದೇ, ಯಾರದೊ ಹಿತಾಸಕ್ತಿಗೊಸ್ಕರ ವಿಪಕ್ಷಗಳು ವಕ್ಫ್ ಕಾಯಿದೆಯನ್ನು ವಿರೋಧಿಸುತ್ತಿದೆ. ಇದನ್ನು ತಡೆಯಲು ವಕ್ಫ್ ಕಾಯ್ದೆಗೆ ತಿದ್ದುಪಡಿ ಅಗತ್ಯವಿದೆ ಎಂದಿದ್ದಾರೆ.