ಲೋಕಾ ಬಲೆಗೆ ಮುಖ್ಯಶಿಕ್ಷಕ

0
15

ಬೀದರ್ : ಇಲ್ಲಿಯ ಶಾಲೆಯೊಂದರ ಮುಖ್ಯ ಶಿಕ್ಷಕನೋರ್ವ ೫೦ ಸಾವಿರ ರೂ. ಲಂಚ ಪಡೆಯುವಾಗ ರೆಡ್ ಹ್ಯಾಂಡ್ ಆಗಿ ಲೋಕಾ ಬಲೆಗೆ ಬಿದ್ದಿದ್ದಾನೆ.

ಮುಖ್ಯ ಶಿಕ್ಷಕ ತುಕಾರಾಂ ಕಾಂಬಳೆ ಲೋಕಾ ಬಲೆಗೆ ಬಿದ್ದ ಮುಖ್ಯ ಶಿಕ್ಷಕ. ಶಿಕ್ಷಕಿ ಶಶಿಕಲಾ ಎಂಬುವವರು ಪಿಂಚಣಿ ಮಂಜೂರಿ ಪ್ರಕ್ರಿಯೆಗಾಗಿ ಮುಖ್ಯಶಿಕ್ಷಕನ ಬಳಿ ಮನವಿ ಮಾಡಿದ್ದರು. ಆದರೆ, ಫೈಲ್ ವಿಲೇವಾರಿ ಮಾಡಲು ತುಕಾರಾಂ ಕಾಂಬಳೆ ಅವರು ಬರೊಬ್ಬರಿ ೩ ಲಕ್ಷಕ್ಕೆ ಬೇಡಿಕೆ ಇಟ್ಟಿದ್ದರು. ೧ ಲಕ್ಷ ಹಣದ ಚೆಕ್ ಪಡೆದು, ೫೦ ಸಾವಿರ ರೂ. ಪಡೆಯುವ ವೇಳೆ ಲೋಕಾಯುಕ್ತ ಡಿವೈಎಸ್‌ಪಿ ಎನ್.ಎಮ್.ಓಲೇಕಾರ್ ಮಾಗದರ್ಶನದಲ್ಲಿ ದಾಳಿ ಮಾಡಿ, ಶಿಕ್ಷಕನನ್ನು ದಸ್ತಗಿರಿ ಮಾಡಿದ್ದಾರೆ ಎಂದು ಲೋಕಾಯುಕ್ತ ಮೂಲಗಳು ತಿಳಿಸಿವೆ.

Previous articleಒಂದು ತಿಂಗಳವರೆಗೆ ಹುಬ್ಬಳ್ಳಿ- ಮುಂಬೈ ಇಂಡಿಗೊ ವಿಮಾನ ಸಂಚಾರ ರದ್ದು
Next articleಚುನಾವಣಾ ಬಾಂಡ್, ಕೋರ್ಟ್ ತೀರ್ಪು ಹಿನ್ನಡೆಯಲ್ಲ