ಬೆಳಗಾವಿ: ಈವರೆಗಿನ ಯಾವುದೇ ಸರ್ಕಾರ ಲಿಂಗಾಯತರ ಮೇಲೆ ದಾಳಿ ಮಾಡಿರಲಿಲ್ಲ. ಸಿದ್ದರಾಮಯ್ಯ ಅವರೇ ಲಿಂಗಾಯತರ ಮೇಲೆ ಲಾಠಿ ಎತ್ತಿದ ಮೊದಲ ಮುಖ್ಯಮಂತ್ರಿ. ಇವರೊಬ್ಬ ಲಿಂಗಾಯತ ವಿರೋಧಿ ನಾಯಕ ಎಂದೂ ಬಸವಜಯ ಮೃತ್ಯುಂಜಯ ಸ್ವಾಮೀಜಿ ದೂರಿದರು.
ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಮ್ಮನ್ನು ಭೇಟಿಯಾಗಲು ಮುಖ್ಯಮಂತ್ರಿ ಹೇಳಿ ಕಳಿಸಿದ ಕಾರಣ ಅಲ್ಲಿಗೆ ಹೋಗುವಾಗ ಲಾಠಿಚಾರ್ಜ್ ಮಾಡಲಾಗಿದೆ, ಅವರೇನೇ ಮಾಡಿದರೂ ತಮ್ಮ ಹೋರಾಟ ನಿಲ್ಲಲ್ಲ ಎಂದು ಸ್ವಾಮೀಜಿ ಹೇಳಿದರು. ಪ್ರತಿಭಟನೆಯ ಮುಂದುವರಿದ ಭಾಗವಾಗಿ ಡಿಸೆಂಬರ್ 12ರಂದು ಪಂಚಮಸಾಲಿ ಸಮುದಾಯದವರು ತಾವಿರುವ ಹಳ್ಳಿ, ಹೋಬಳಿ, ತಾಲ್ಲೂಕು ಮತ್ತು ಜಿಲ್ಲಾ ಕೇಂದ್ರಗಳಲ್ಲಿ ರಾಸ್ತಾರೋಕೋ ಮಾಡುತ್ತಾರೆ, ಹೋರಾಟದ ಮುಂದಿನ ಹಂತವನ್ನು ಅವತ್ತು ಪ್ರಕಟಿಸಲಾಗುವುದು ಎಂದರು.