ಲಂಚಾವತಾರದ ಮುಖವಾಡ ಬಯಲು

0
29

ಬೆಂಗಳೂರು: 40% ಸರ್ಕಾರ ಎಂದು ಹಿಂದಿನ ಬಿಜೆಪಿ ಸರ್ಕಾರದ ವಿರುದ್ಧ ಸುಳ್ಳು, ಅಪಪ್ರಚಾರದ ಮೂಲಕ ಅಧಿಕಾರಕ್ಕೆ ಬಂದ ಕರ್ನಾಟಕ ಕಾಂಗ್ರೆಸ್‌ ಪಕ್ಷ, 60% ಲಂಚ ಹೊಡೆದು ರಾಜ್ಯವನ್ನ ಲೂಟಿ ಮಾಡುತ್ತಿದೆ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಹೇಳಿದ್ದಾರೆ.
ಈ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿದ್ದು ನಗರಾಭಿವೃದ್ದಿ ಇಲಾಖೆಯ ಮುಖ್ಯ ಕಾರ್ಯದರ್ಶಿಗಳಿಗೆ ಖಾಸಗಿ ಕಂಪನಿಯೊಂದು ಏಪ್ರಿಲ್ 22ರಂದು ಬರೆದಿರುವ ಪತ್ರದಲ್ಲಿ ಕಾಂಗ್ರೆಸ್ ಸರ್ಕಾರದ 60% ಲಂಚಾವತಾರದ ಮುಖವಾಡವನ್ನು ಬಯಲು ಮಾಡಿದೆ.
ಸಿಎಂ ಸಿದ್ದರಾಮಯ್ಯನವರೇ, ಕರ್ನಾಟಕ ರಾಜ್ಯ ಮದ್ಯ ಮಾರಾಟಗಾರ ಸಂಘ ಬರೆದಿರುವ ಪತ್ರದಲ್ಲಿ 700 ಕೋಟಿ ರೂಪಾಯಿ ಲಂಚದ ಬಗ್ಗೆ ಆರೋಪ ಮಾಡಿದ್ದಾರೆ, ಈಗ ಖಾಸಗಿ ಕಂಪನಿಯೊಂದು 60% ಕಮಿಷನ್ ಆರೋಪ ಮಾಡುತ್ತಿದೆ. ದಿನ ಬೆಳಗಾದರೆ ಒಂದು ಹೊಸ ಹಗರಣದ ಕಥೆ ಕೇಳಿ ಕೇಳಿ ಕನ್ನಡಿಗರು ರೋಸಿ ಹೋಗಿದ್ದಾರೆ. ಕನ್ನಡಿಗರ ತಾಳ್ಮೆ ಪರೀಕ್ಷೆ ಮಾಡಬೇಡಿ. ರಾಜೀನಾಮೆ ಕೊಟ್ಟು ಇರುವ ಅಲ್ಪ ಸ್ವಲ್ಪ ಗೌರವವನ್ನದರೂ ಉಳಿಸಿಕೊಳ್ಳಿ ಎಂದಿದ್ದಾರೆ.

Previous article24 ಗಂಟೆ ಗಣಿಗಾರಿಕೆ…
Next articleಆಸ್ಪತ್ರೆಯ ನಾಲ್ಕನೇ ಮಹಡಿಯಿಂದ ಹಾರಿ ಬಾಣಂತಿ ಸಾವು