ರೆಪೋ ದರದಲ್ಲಿ ಯಥಾಸ್ಥಿತಿ

0
12

11ನೇ ಬಾರಿ ರೆಪೋ ದರ ಶೇಕಡಾ 6.5ರಲ್ಲಿ ಯಾವುದೇ ಬದಲಾವಣೆ ಇಲ್ಲ!

ನವದೆಹಲಿ: ಸತತ 11ನೇ ಅವಧಿಗೆ ರೆಪೋ ದರವನ್ನು ಶೇಕಡ 6.5 ರಲ್ಲೇ ಮುಂದುವರಿಸಲಾಗಿದೆ ಎಂದು ಆರ್‌ಬಿಐ ಗವರ್ನರ್ ಶತಿಕಾಂತ ದಾಸ್ ಶುಕ್ರವಾರ ತಿಳಿಸಿದ್ದಾರೆ.
ಈ ನಿರ್ಧಾರವನ್ನು 4:2 ಬಹುಮತದಿಂದ ತೆಗೆದುಕೊಳ್ಳಲಾಗಿದೆ, ಸ್ಟ್ಯಾಂಡಿಂಗ್ ಡೆಪಾಸಿಟ್ ಫೆಸಿಲಿಟಿ (ಎಸ್‌ಡಿಎಫ್‌) ದರವನ್ನೂ ಶೇಕಡ 6.25ರಲ್ಲೇ ಮುಂದುವರಿಸಲು ನಿರ್ಧರಿಸಲಾಗಿದೆ. ಇದೇ ವೇಳೆ, ಮಾರ್ಜಿನಲ್ ಸ್ಟ್ಯಾಂಡಿಂಗ್ ಫೆಸಿಲಿಟಿ ಮತ್ತು ಬ್ಯಾಂಕ್ ರೇಟ್ ಅನ್ನು ಶೇಕಡ 6.75 ರಲ್ಲೇ ಮುಂದುವರಿಸಲು ತೀರ್ಮಾನಿಸಲಾಗಿದೆ, ಇದೀಗ ಹಣದುಬ್ಬರಕ್ಕೆ ಮಾತ್ರ ಒತ್ತು ನೀಡಿದ್ದು, ಹಣದುಬ್ಬರದಿಂದ ಸಾಮಾನ್ಯ ಜನರಿಗೆ ಪರಿಹಾರ ಒದಗಿಸುವುದು ನಮ್ಮ ಆದ್ಯತೆಯಾಗಿದೆ, ಆದರೆ ದೇಶದ ಬೆಳವಣಿಗೆ ದರವೂ ಮುಖ್ಯವಾಗಿದೆ, ಆದ್ದರಿಂದ, MPC ಈಗ ತನ್ನ ದೃಷ್ಟಿಕೋನವನ್ನು ತಟಸ್ಥಗೊಳಿಸಿದೆ, ಅಂದರೆ ಮುಂದಿನ ದಿನಕ್ಕೆ ಅನುಗುಣವಾಗಿ, ರೆಪೋ ದರ ಅಥವಾ ಬ್ಯಾಂಕುಗಳ ಸಾಲದ ದರಗಳನ್ನು ಕಡಿತಗೊಳಿಸಲಾಗುತ್ತದೆ ಎಂದು ಶಕ್ತಿಕಾಂತ ದಾಸ್‌ ವಿವರಿಸಿದರು.

Previous articleಬಿಯರ್ ಬಾಟಲಿಯಿಂದ ಇರಿದು ಕಾರ್ಮಿಕನ ಕೊಲೆ
Next articleಸಂಸತ್ ಅಧಿವೇಶನ: ಸೀಟ್​ನಲ್ಲಿ ಕಂತೆ ಕಂತೆ ನೋಟು ಪತ್ತೆ.. ..