ರಾಯರ ಆರಾಧನೆಯಲ್ಲಿ ಯದುವೀರ್ ಒಡೆಯರ್ ಭಾಗಿ

0
30

ರಾಯಚೂರು: ಮಂತ್ರಾಲಯದಲ್ಲಿ ಶ್ರೀ ರಾಘವೇಂದ್ರ ಸ್ವಾಮಿಗಳ ಆರಾಧನೆ ಮಹೋತ್ಸವದಲ್ಲಿ ಮೈಸೂರು ರಾಜ ಮನೆತನದ ಶ್ರೀ ಯದುವೀರ್ ಒಡೆಯರ್ ಪಾಲ್ಗೊಂಡರು.


ಬುಧವಾರ ರಾತ್ರಿ ಆಗಮಿಸಿದ ಅವರನ್ನು ಶ್ರೀಮಠದಿಂದ ಸಾಂಪ್ರದಾಯಿಕವಾಗಿ ಸ್ವಾಗತಿಸಲಾಯಿತು. ಮೊದಲಿಗೆ ಗ್ರಾಮದೇವಿ ಮಂಚಾಲಮ್ಮ ಹಾಗೂ ರಾಯರ ಬೃಂದಾವನ ದರ್ಶನ ಪಡೆದು ಪೂಜೆ ಸಲ್ಲಿಸಿದರು. ಬಳಿಕ ರಾಯರ ಬೃಂದಾವನ ಸುತ್ತಲಿನ ಶಿಲಾಮಂಟಪಕ್ಕೆ ಅಳವಡಿಸುತ್ತಿರುವ ಸ್ವರ್ಣಕವಚವನ್ನು ಶ್ರೀಮಠದ ಪೀಠಾಧಿಪತಿ ಶ್ರೀ ಸುಬುಧೇಂದ್ರ ತೀರ್ಥರು ಹಾಗೂ ಯದುವೀರ್ ಒಡೆಯರ್ ಜಂಟಿಯಾಗಿ ಲೋಕಾರ್ಪಣೆ ಮಾಡಿದರು. ಬಳಿಕ ಮಠದಲ್ಲಿ ನಡೆದ ಪ್ರಹ್ಲಾದರಾಜರ ಗಜವಾಹನೋತ್ಸವದಲ್ಲಿ ಪಾಲ್ಗೊಂಡು ಪ್ರಹ್ಲಾದರಾಜರಿಗೆ ಚಾಮರ ಸೇವೆ ಮಾಡಿದರು.

Previous articleನೀರಿನ ದರ ಏರಿಕೆಯ ಸುಳಿವು ಕೊಟ್ಟ ಡಿ ಕೆ ಶಿವಕುಮಾರ
Next articleಐವನ್ ಡಿಸೋಜ ವಿರುದ್ಧ FIR ದಾಖಲಿಸಲು ಆಗ್ರಹ