Home Advertisement
Home ತಾಜಾ ಸುದ್ದಿ ರಾಮ ಮಂದಿರವಾಯಿತು ಇನ್ನು ಸೀತಾ ಮಂದಿರ ಕಟ್ಟುತ್ತೇವೆ

ರಾಮ ಮಂದಿರವಾಯಿತು ಇನ್ನು ಸೀತಾ ಮಂದಿರ ಕಟ್ಟುತ್ತೇವೆ

0
66

ಬಿಹಾರ: ರಾಮಮಂದಿರ ಆಯ್ತು ಇನ್ನು ಸೀತಾ ಮಂದಿರ ನಿರ್ಮಾಣ ಮಾಡುತ್ತೇವೆ ಎಂದು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಹೇಳಿದ್ದಾರೆ.
ಬಿಹಾರದ ಸೀತಾಮರ್ಹಿಯಲ್ಲಿ ಬೃಹತ್ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಕೇಂದ್ರದಲ್ಲಿ ಮೂರನೇ ಬಾರಿಗೆ ಬಿಜೆಪಿ ಅಧಿಕಾರಕ್ಕೆ ಬಂದರೆ ಸೀತಾಮರ್ಹಿಯಲ್ಲಿ ಸೀತಾಮಾತೆಯ ಭವ್ಯ ಮಂದಿರವನ್ನು ನಿರ್ಮಿಸುವುದಾಗಿ ಭರವಸೆ ನೀಡಿದರು.
“ನಾವು ಮತ ಬ್ಯಾಂಕ್‌ಗೆ ಹೆದರುವುದಿಲ್ಲ. ಪ್ರಧಾನಿ ನರೇಂದ್ರ ಮೋದಿ ಅಯೋಧ್ಯೆಯಲ್ಲಿ ರಾಮಲಲ್ಲಾ ಮಂದಿರವನ್ನು ನಿರ್ಮಿಸಿದ್ದಾರೆ. ಈಗ ಉಳಿದಿರುವುದು ಸೀತಾ ಮಾತೆಯ ಜನ್ಮಸ್ಥಳದಲ್ಲಿ ದೊಡ್ಡ ಸ್ಮಾರಕವನ್ನು ನಿರ್ಮಿಸುವ ಕೆಲಸ ಮಾತ್ರ. ರಾಮಮಂದಿರದಿಂದ ದೂರವಿಟ್ಟವರು ಇದನ್ನು ಮಾಡಲು ಸಾಧ್ಯವಿಲ್ಲ, ಆದರೆ ಸೀತಾ ಮಾತೆಯ ಜೀವನದಂತೆ ಆದರ್ಶಪ್ರಾಯವಾದ ದೇವಾಲಯವನ್ನು ಯಾರಾದರೂ ನಿರ್ಮಿಸಲು ಸಾಧ್ಯವಾದರೆ, ಅದು ನರೇಂದ್ರ ಮೋದಿಯವರ ಬಳಿ ಮಾತ್ರ, ಅಂದರೆ ಅದು ಬಿಜೆಪಿ ಮಾತ್ರ” ಎಂದರು.