ಬೆಂಗಳೂರು: ರಾಮನ ಮೇಲೆ ನನಗೆ ಭಕ್ತಿ ಇಲ್ಲ, ಅದಕ್ಕೆ ನಾನು ರಾಮಮಂದಿರಕ್ಕೆ ಹೋಗಲ್ಲ ಎಂದು ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದರು.
ರಾಮ ಮಂದಿರ ಉದ್ಘಾಟನೆ ವಿಚಾರವಾಗಿ ಮಾತನಾಡಿದ ಅವರು, ನಾನು ಸಂವಿಧಾನದ ಭಕ್ತ. ರಾಮನ ಮೇಲೆ ನನಗೆ ಭಕ್ತಿ ಇಲ್ಲ, ಹೀಗಾಗಿ ರಾಮನನ್ನು ನೋಡಲು ಹೋಗಲ್ಲ. ಆದರೆ ಅಯೋಧ್ಯೆಯಲ್ಲಿನ ಕಲೆ, ವಾಸ್ತುಶಿಲ್ಪ ನೋಡೊಕೆ ಮಾತ್ರ ಹೋಗುತ್ತೇನೆ. ನಾನು ಬುದ್ಧ ಬಸವ ತತ್ವ ಪಾಲನೆ ಮಾಡುತ್ತೇನೆ ಎಂದರು.