ರಾಜಾಸಿಂಗ್ ನಿರ್ಬಂಧ: ನ್ಯಾಯಾಲಯದಲ್ಲಿ ಪ್ರಶ್ನೆ

0
13

ಮುಧೋಳ: ನಾಲ್ಕು ಬಾರಿ ಶಾಸಕರಾಗಿರುವ ರಾಜಾಸಿಂಗ್ ಅವರು ಜಿಲ್ಲೆಗೆ ಬಾರದಂತೆ ನಿರ್ಬಂಧಿಸಿರುವುದು ಅಸಂವಿಧಾನಿಕ ನಡೆಯಾಗಿದೆ ಎಂದು ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಗುಡುಗಿದ್ದಾರೆ.
ಮುಧೋಳದಲ್ಲಿ ನಡೆಯುತ್ತಿರುವ ಜನತಾರಾಜಾ ಗಣೇಶನ ವಿಸರ್ಜನಾ ಮೆರವಣಿಗೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಜಿಲ್ಲಾಡಳಿತದ ಈ ತೀರ್ಮಾನವನ್ನು ನ್ಯಾಯಾಲಯದಲ್ಲೇ ಪ್ರಶ್ನೆ ಮಾಡುತ್ತೇವೆ. ಇದರ ಹಿಂದಿರುವ ಕುತಂತ್ರ ಬಯಲಿಗೆ ಎಳೆಯುತ್ತೇವೆ ಎಂದು ಎಚ್ಚರಿಸಿದರು.

Previous articleಮಹದಾಯಿ ಯೋಜನೆ ಕೇಂದ್ರ ಸರ್ಕಾರ ಸ್ಪಂದಿಸಲಿ
Next articleನಾಳೆ ಆತಿಶಿ ಪ್ರಮಾಣವಚನ