ರಸ್ತೆ ಅಪಘಾತ ಖಾಸಗಿ  ಉದ್ಯೋಗಿ ಕೈ ಜಖಮ್

0
33

ಹೊಸಪೇಟೆ : ಖಾಸಗಿ ಆರ್ಥಿಕ ಸಂಸ್ಥೆಯಲ್ಲಿ ಸಹಾಯಕ ವ್ಯವಸ್ಥಾಪನಾಗಿ ಕಾರ್ಯನಿರ್ವಹಿಸುತ್ತಿದ್ದ ಮಂಜೇಶ್(34) ಕೈ ಕಳೆದುಕೊಂಡ ಘಟನಬೆಳಿಗ್ಗೆ ರಸ್ತೆ ಅಪಘಾತದಲ್ಲಿ ಜರುಗಿದೆ.
ಹೊಸಪೇಟೆಯ ಬಸ್ ನಿಲ್ದಾಣದ ಮುಂದೆ ಪಾದಚಾರಿ ರಸ್ತೆಯಲ್ಲಿ ಸರ್ಕಾರಿ ಸಾರಿಗೆ ಬಸ್ ಡಿಕ್ಕಿಹೊಡೆದು ಪಾದಚಾರಿ ರಸ್ತೆಯಲ್ಲಿ ನಿಂತಿದ್ದ ಮಂಜೇಶ್ ಎಷ್ಟೇ ಪ್ರಯತ್ನ ಪಟ್ಟರು ಕೈ ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ,
ಬೆಂಗಳೂರಿನಿಂದ ಬಂದಿದ್ದ ಬಸ್ ಬ್ರೇಕ್ ಫೇಲ್ ಆಗಿ ಪಾದಚಾರಿ ರಸ್ತೆಯಲ್ಲಿ ನಿಂತಿದ್ದ ವ್ಯಕ್ತಿಗೆ ಡಿಕ್ಕಿ ಹೊಡೆದಿದೆ. ರಸ್ತೆಯಲ್ಲಿ ನಿಂತಿದ್ದ ಬಸ್ ಗೆ ಡಿಕ್ಕಿಹೊಡೆಯುವುದನ್ನು ತಪ್ಪಿಸಲು ಪಾದಚಾರಿ ರಸ್ತೆಗೆ ತಿರುಗಿಸಲಾಗಿ ವ್ಯಕ್ತಿ ಬಲಿಯಾಗಬೇಕಾಗಿತು. ವ್ಯಕ್ತಿ ಎಷ್ಟೇ ಪ್ರಯತ್ನ ಪಟ್ಟರು ತಾನು ಪಾರಾದರೂ ಕೈ ಮಾತ್ರ ತಪ್ಪಿಸಿಕೊಳ್ಳಲು ಸಾಧ್ಯವಾಗಿಲ್ಲವಾದುದರಿಂದ ಎಡಗೈ ಸಂಪೂರ್ಣ ಜಖಂಗೊಂಡಿದೆ. ಈ ಕುರಿತು ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬ್ರೇಕ್ ಫೇಲ್ ?: ಬೆಂಗಳೂರಿನಿಂದ ಬಂದ ಬಸ್ ಹೊಸಪೇಟೆಯಲ್ಲಿ ಪ್ರಯಾಣಿಕರನ್ನು ಇಳಿಸಿದ ಮೇಲೆ ಡಿಪೋಗೆ ಹೋಗುವಾಗ ಘಟನೆ ನಡೆದಿದೆ ಮತ್ತೊಂದು ಸರ್ಕಾರಿ ಬಸ್ ನಿಂತಿರುವಾಗ ಸಂಧಿಯಲ್ಲಿಯೇ ತೆರಳಲು ಮುಂದಾಗಿರುವುದೆ ಹಾಗೂ ಅವಸರ ಕಾರಣ, ಬ್ರೇಕ್ ಫೇಲ್ ಆಗಿದ್ದರೆ ಕೂಗಳತೆಯಲ್ಲಿ ನಿಲ್ಲುವುದು ಹೇಗೆ ಸಾಧ್ಯ ? ವೇಗ ಹಾಗೂ ನಿರ್ಲಕ್ಷ್ಯ ಕಾರಣವೇ ಎಂಬುದು ಪೊಲೀಸ್ ತನಿಖೆಯಿಂದ ತಿಳಿಯಬೇಕು.

Previous article೩೦ ಲಕ್ಷ ರೂ. ಮೌಲ್ಯದ ಸಸಿಗಳ ಖರೀದಿಗೆ ಹೆಸರು ನೋಂದಣಿ
Next articleಮಳೆಯಲ್ಲಿದ್ದವರಿಗೆ ಶ್ರೀಮಠದಲ್ಲಿಯೇ ಆಶ್ರಯ ಕಲ್ಪಿಸಿದ ಮಂತ್ರಾಲಯದ ಶ್ರೀಗಳು