Home Advertisement
Home ತಾಜಾ ಸುದ್ದಿ ರಷ್ಯಾಕ್ಕೆ ಭಾರತದ ನಿಲುವು ಸ್ಪಷ್ಟಪಡಿಸಿದ ಸರ್ವಪಕ್ಷಗಳ ನಿಯೋಗ

ರಷ್ಯಾಕ್ಕೆ ಭಾರತದ ನಿಲುವು ಸ್ಪಷ್ಟಪಡಿಸಿದ ಸರ್ವಪಕ್ಷಗಳ ನಿಯೋಗ

0
129

ರಷ್ಯಾ: ಭಯೋತ್ಪಾದನೆ ಬೆಂಬಲಿಸುತ್ತಿರುವ ಪಾಕಿಸ್ತಾನದ ನಿಜ ಬಣ್ಣ ಬಯಲು ಮಾಡಲು ಇಂದು ಸರ್ವಪಕ್ಷಗಳ ನಿಯೋಗವು ಮಾಸ್ಕೋದಲ್ಲಿ ನಡೆಯುವ ಸಭೆಯಲ್ಲಿ ಭಾಗವಹಿಸಲಿದ್ದು, ಬಳಿಕ ಸ್ಲೊವೇನಿಯಾ ದೇಶದತ್ತ ಪ್ರಯಾಣಿಸಲಿದೆ.
ನಿನ್ನೆ ರಷ್ಯಾದಲ್ಲಿ ರಷ್ಯನ್ ಒಕ್ಕೂಟದ ಮಾಜಿ ಪ್ರಧಾನಿ ಹಾಗೂ ರಷ್ಯನ್ ಇನ್ಸ್ಟಿಟ್ಯೂಟ್ ಆಫ್ ಸ್ಟ್ರಾಟೆಜಿಕ್ ಸ್ಟಡೀಸ್ (RISS) ನ ಮುಖ್ಯಸ್ಥ ಮಿಖಾಯಿಲ್ ಫ್ರಾಡ್ಕೋವ್ ಅವರನ್ನು ಸಹ ಸಂಸದರೊಂದಿಗೆ ಭೇಟಿಯಾದರು, ಸಂಸದರಾದ ಕ್ಯಾಪ್ಟನ್ ಬ್ರಿಜೇಶ್ ಚೌಟ ಸೇರಿದಂತೆ ಐವರು ಸಂಸದರನ್ನು ಒಳಗೊಂಡ ಈ ನಿಯೋಗವನ್ನು ಅಲ್ಲಿನ ಭಾರತೀಯ ರಾಯಭಾರಿ ಅಧಿಕಾರಿಗಳು ಬರಮಾಡಿಕೊಂಡಿದ್ದರು. ರಷ್ಯಾದಲ್ಲಿನ ಭಾರತದ ರಾಯಭಾರಿ ವಿನಯ್ ಕುಮಾರ್ ಅವರು ಸರ್ವಪಕ್ಷ ಸಂಸದೀಯ ನಿಯೋಗದ ಜೊತೆಗೆ ಭಾರತ-ರಷ್ಯಾ ಸಂಬಂಧಗಳ ವಿವಿಧ ಅಂಶಗಳ ಕುರಿತು ಸಮಗ್ರ ಮಾಹಿತಿ ಹಂಚಿಕೊಂಡರು. ಶನಿವಾರದಂದು ಸರ್ವಪಕ್ಷಗಳ ನಿಯೋಗವು ಮಾಸ್ಕೋದಲ್ಲಿ ನಡೆಯುವ ಸಭೆಯಲ್ಲಿ ಭಾಗವಹಿಸಲಿದ್ದು, ಬಳಿಕ ಸ್ಲೊವೇನಿಯಾ ದೇಶದತ್ತ ಪ್ರಯಾಣಿಸಲಿದೆ.