ಬೆಂಗಳೂರು: ನಟ ಶಿವರಾಜ್‌ಕುಮಾರ್ ಅವರ ಬಹು ನಿರೀಕ್ಷೆಯ ಚಿತ್ರದ ‘ಭೈರತಿ ರಣಗಲ್’ ಸಿನಿಮಾದ ಟ್ರೈಲರ್ ಬಿಡುಗಡೆಯಾಗಿದೆ.
ಶಿವಣ್ಣನ ಖಡಕ ಡೈಲಾಗ್‌ಗಳಿಗೆ ಅಭಿಮಾನಿಗಳು ಫಿಧಾ ಆಗಿದ್ದಾರೆ, ಇನ್ಮೇಲಿಂದ ರೋಣಪುರದಲ್ಲಿ ಇರೋದು ಸರ್ವೇ ಕಲ್ಲುಗಳಲ್ಲ.. ರಣಗಲ್ ಸಾಮ್ರಾಜ್ಯದ ಮೈಲಿಗಲ್ಲುಗಳು” ಎನ್ನುವಂತಹ ಡೈಲಾಗ ಮೂಲಕ ಅಬ್ಬರಿಸಿದ್ದಾರೆ,ಈ ಚಿತ್ರವನ್ನು ಗೀತಾ ಶಿವರಾಜ್‌ಕುಮಾರ್ ಗೀತಾ ಪಿಕ್ಚರ್ಸ್ ಬ್ಯಾನರ್ ಅಡಿ ನಿರ್ಮಿಸಲಾಗಿದೆ. ನರ್ತನ್ ಕಥೆ ಬರೆದು ನಿರ್ದೇಶನ ಮಾಡಿದ್ದಾರೆ, ಚಿತ್ರದ ಹಾಡುಗಳಿಗೆ ರವಿ ಬಸ್ರೂರ್ ಸಂಗೀತ ನೀಡಿದ್ದು. ಚಿತ್ರದಲ್ಲಿ ಶಿವರಾಜ್‌ಕುಮಾರ್, ಶ್ರೀಮುರಳಿ, ರುಕ್ಮಿಣಿ ವಸಂತ್, ರಾಹುಲ್ ಬೋಸ್, ನಾನಾ ಪಾಟೇಕರ್, ಯೋಗಿಬಾಬು, ಛಾಯಾಸಿಂಗ್, ದೇವರಾಜ್, ವಸಿಷ್ಠ ಸಿಂಹ ಹಾಗೂ ಇನ್ನಿತರರು ನಟಿಸಿದ್ದಾರೆ. ನವೆಂಬರ್ 15ಕ್ಕೆ ‘ಭೈರತಿ ರಣಗಲ್’ ಸಿನಿಮಾ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಬಿಡುಗಡೆಗೆ ಸಜ್ಜಾಗಿದೆ.