ಯೋಗೇಶ್ವರ್ ಹೋಗಿದ್ದು ಅನಿರೀಕ್ಷಿತವೇನಲ್ಲ…

0
29

ಬೆಂಗಳೂರು: ಸಿಪಿ ಯೋಗೇಶ್ವರ್ ಬಿಜೆಪಿ ತೊರೆದು ಕಾಂಗ್ರೆಸ್ ಪಕ್ಷ ಸೇರಿದ್ದು ತಮ್ಮ ಪಕ್ಷಕ್ಕೆ ಅನಿರೀಕ್ಷಿತವೇನಲ್ಲ ಎಂದು ಬಿಜೆಪಿಯ ರಾಜ್ಯಾಧ್ಯಕ್ಷ ವಿಜಯೇಂದ್ರ ಹೇಳಿದ್ದಾರೆ.
ನಗರದಲ್ಲಿ ಸುದ್ದಿಗಾರಾರೊಂದಿಗೆ ಮಾತನಾಡಿ ತಮ್ಮ ನಿರ್ಣಯ ಸರಿಯೋ ತಪ್ಪೋ ಅನ್ನೋದು ಯೋಗೇಶ್ವರ್ ಅವರಿಗೆ ಮುಂದೆ ಗೊತ್ತಾಗಲಿದೆ, ಅವರು ಹೋಗಿದ್ದರಿಂದ ಪಕ್ಷಕ್ಕೆ ನಷ್ಟವೇನೂ ಇಲ್ಲ ಎಂದ ಅವರು, ಬಿಜೆಪಿಯ ರಾಜ್ಯಾಧ್ಯಕ್ಷನಾಗಿ ಅವರಿಗೆ ಒಳ್ಳೆಯದಾಗಲಿ ಎಂದಷ್ಟೇ ಬಯಸುತ್ತೇನೆ, ಇಂಥದೊಂದು ತೀರ್ಮಾನ ಅವರು ತೆಗೆದುಕೊಳ್ಳುವ ಬಗ್ಗೆ ನನಗೆ ಅನುಮಾನ ಮತ್ತು ನಿರೀಕ್ಷೆಯಿತ್ತು, ಇನ್ನು ಚನ್ನಪಟ್ಟಣದಲ್ಲಿ ಕುಮಾರಸ್ವಾಮಿ ಸೂಚಿಸಿದ ಅಭ್ಯರ್ಥಿಗೆ ಬಿಜೆಪಿ ಬೆಂಬಲ ಸೂಚಿಸುತ್ತದೆ ಎಂದರು.

Previous articleನನ್ನ ಜತೆ ಸಹಕರಿಸು ಇಲ್ಲಾಂದ್ರೆ ೨೪ ತುಂಡು ಮಾಡುವೆ
Next articleಮಾರಕಾಸ್ತ್ರಗಳಿಂದ ದಾಳಿ: ಇಬ್ಬರಿಗೆ ಗಂಭೀರ ಗಾಯ