ಯುವಕನ ಕಿರುಕುಳ: ಮನನೊಂದ ಬಾಲಕಿ ನೇಣಿಗೆ ಶರಣು

0
11
ಆತ್ಮಹತ್ಯೆ

ವಿಜಯಪುರ : ಯುವಕನ ಕಿರುಕುಳಕ್ಕೆ ನೊಂದು ಬಾಲಕಿ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.
ಪ್ರೀತಿ ಮಾಡು ಎಂದು ಯುವಕ ಚುಡಾಯಿಸಿದ ಕಾರಣಕ್ಕೆ ಮನನೊಂದ ಬಾಲಕಿಯೊಬ್ಬಳು ನೇಣು ಹಾಕಿಕೊಂಡು ಸಾವನ್ನಪ್ಪಿದ ಘಟನೆ ವಿಜಯಪುರದ ಮುದ್ದೇಬಿಹಾಳ ಪೋಲಿಸ್​ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಕಳೆದ ಹಲವು ದಿನಗಳಿಂದ ಸಂಗಮೇಶ್ ಎಂಬ ಯುವಕ ಅಪ್ರಾಪ್ತ ಬಾಲಕಿ ಹಿದೆ ಬಿದ್ದು ಪ್ರೀತಿಸುವಂತೆ ಪೀಡಿಸುತ್ತಿದ್ದ. ಅಪ್ರಾಪ್ತೆ ಕಾಲೇಜಿಗೆ ಹೋಗುವಾಗಲೂ ಹಿಂದೆ ಬಂದು ಚುಡಾಯಿಸುತ್ತಿದ್ದ. ಅಸಭ್ಯವಾಗಿ ವರ್ತಿಸುತ್ತಿದ್ದ. ಇದನ್ನು ಪ್ರಶ್ನಿಸಿದ್ದ ಯುವತಿಯ ಸಹೋದರಿ ಮೇಲೆ ಹಲ್ಲೆ ನಡೆಸಿದ್ದ. ಅಲ್ಲದೇ ಜೀವ ಬೆದರಿಕೆ ಹಾಕಿದ್ದ. ಈ ಕುರಿತಾಗಿ ಕಳೆದ ನವೆಂಬರ್​ 27ರಂದು ಬಾಲಕಿ ಮುದ್ದೇಬಿಹಾಳ ಪೋಲಿಸ್​ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿದ್ದಳು. ಬಾಲಕಿ ದೂರನ್ನು ಆಧಾರಿಸಿ ಪೋಲಿಸರು ಪೋಕ್ಸೋ ಪ್ರಕರಣ ದಾಖಲಿಸಿಕೊಂಡು ಪ್ರಮುಖ ಆರೋಪಿಗಳಾದ ಸಂಗಮೇಶ ಜುಂಜವಾರ, ಮೌನೇಶ ಮಾದರ ಎಂಬುವವರನ್ನು ಬಂಧಿಸಿದ್ದರು. ಕಿರುಕುಳಕ್ಕೆ ನೊಂದ ಬಾಲಕಿ ಇದೀಗ ಮನೆಯಲ್ಲಿಯೇ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

Previous articleಛತ್ರಪತಿ ಪಾತ್ರದಲ್ಲಿ ರಿಷಬ್: ಐತಿಹಾಸಿಕ ಚಿತ್ರದಲ್ಲಿ ಕಾಂತಾರ ಹೀರೋ
Next articleವ್ಯಕ್ತಿ ಪೂಜೆ ಆದರೂ ಮಾಡಿ, ಪಕ್ಷ ಪೂಜೆ ಆದರೂ ಮಾಡಿ…