ಬಾಗಲಕೋಟೆ(ಇಳಕಲ್): ಕೋಮು ದ್ವೇಷದಿಂದ ನರಳುತ್ತಿರುವ ಇಂದಿನ ದಿನಗಳಲ್ಲಿ ಇಲ್ಲೊಬ್ಬ ಮಹಿಳಾ ಪೋಲಿಸ್ ಅಧಿಕಾರಿ ಸಮಾರಂಭವೊಂದರಲ್ಲಿ ಸುಲಲಿತವಾಗಿ ಮಂಗಳಾರತಿ ಹಾಡಿ ಗಮನ ಸೆಳೆದರು.
ಶಹರ್ ಪೊಲೀಸ್ ಠಾಣೆಗೆ ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮದ ಅಧ್ಯಕ್ಷ ಶಾಸಕ ವಿಜಯಾನಂದ ಕಾಶಪ್ಪನವರ ಶಾಸಕರ ನಿಧಿಯಲ್ಲಿ ಕೊಡಮಾಡಿದ ಗಸ್ತು ವಾಹನದ ಲೋಕಾರ್ಪಣೆ ಸಮಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪಿಎಸ್‌ಐ ಷಹಜಹಾನ ನಾಯಕ ಮಂಗಳಾರತಿಯನ್ನು ಹಾಡಿ ಪೂಜೆಯನ್ನು ವಿಶಿಷ್ಠವಾಗಿಸಿದರು. ಶಾಸಕರ ಆದಿಯಾಗಿ ನೆರೆದ ಜನರು ಷಹಜಹಾನ ನಾಯಕರ ಮಂಗಳಾರತಿಗೆ ಮಂತ್ರಮುಗ್ದರಾದರು. ಮೆಚ್ಚುಗೆ ಸೂಚಿಸಿದರು.