‘ಮಹಾ ಕುಂಭಕ್ಕೆ’ ಕಪ್ಪು ಚುಕ್ಕೆ ತರಲು ಹವಣಿಸುತ್ತಿರುವ ವಿಚಾರವ್ಯಾಧಿಗಳು

0
18

ಸ್ವಯಂಘೋಷಿತ ಬುದ್ದಿಜೀವಿಗಳಿಗೆ ಕುಂಭ ಮೇಳದ ಯಶಸ್ಸು ಅಪಥ್ಯ

ಬೆಂಗಳೂರು: ಅನ್ಯ ಕೋಮಿನ ಹಬ್ಬಗಳಂದು ಪ್ರಾಣಿಬಲಿಯಿಂದ ಬೀದಿ ಬೀದಿಗಳಲ್ಲಿ ಹರಿಯುವ ರಕ್ತಪಾತದಿಂದ ಆಗುವ ಮಾಲಿನ್ಯ, ವರ್ಷಾಂತ್ಯದಲ್ಲಿ ಆಚರಿಸುವ ಹಬ್ಬದಂದು ಸೇರುವ ಕಸದ ರಾಶಿ, ಮರಗಳ ಮಾರಣ ಹೋಮದಿಂದ ಆಗುವ ಹವಾಮಾನದ ವೈಪರೀತ್ಯದ ಬಗ್ಗೆಯೂ ಮಾಲಿನ್ಯ ಮಂಡಳಿಯ ಪರಿಣಿತರು ವಿವರ ನೀಡಲಿ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪ್ರಯಾಗ್‌ ರಾಜ್ ನದಿ ನೀರು ಸ್ನಾನಕ್ಕೆ ಯೋಗ್ಯವಲ್ಲ ಎಂಬ ಮಾಲಿನ್ಯ ನಿಯಂತ್ರಣ ಮಂಡಳಿ ವರದಿ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿ ಜಗತ್ತಿನ ಅತ್ಯಂತ ದೊಡ್ಡ ಸಾಂಸ್ಕೃತಿಕ ಧಾರ್ಮಿಕ ಕಾರ್ಯಕ್ರಮವಾದ, ವಿಶ್ವದಾದ್ಯಂತ ಆಸ್ತಿಕರನ್ನು ಸೆಳೆಯುತ್ತಿರುವ ‘ಮಹಾ ಕುಂಭಕ್ಕೆ’ ಕಪ್ಪು ಚುಕ್ಕೆ ತರಲು ಹವಣಿಸುತ್ತಿರುವ ವಿಚಾರವ್ಯಾಧಿಗಳು, ಸ್ವಯಂಘೋಷಿತ ಬುದ್ದಿಜೀವಿಗಳಿಗೆ ಅತ್ಯಂತ ಯಶಸ್ವಿಯಾಗಿ ನಡೆದ ಕುಂಭ ಮೇಳದ ಯಶಸ್ಸು ಅಪಥ್ಯವಾಗಿದೆ.

ಸಾರ್ವಜನಿಕರು ತಿನ್ನುವ ಆಹಾರ ಪದಾರ್ಥಗಳಲ್ಲಿ ಒಂದು ಕೋಮಿನವರು ಉಗುಳಿದಾಗ ಕಣ್ಮರೆಯಾಗಿದ್ದ ಕಣ್ಮಣಿಗಳು ಈಗ ಕುಂಭ ಮೇಳದಲ್ಲಿ ಧುತ್ತನೆ ಪ್ರತ್ಯಕ್ಷವಾಗಿದ್ದಾರೆ. ತಾಯಿ ಗಂಗಾ ಮಾತೆ, ಕಾಶಿ ವಿಶ್ವನಾಥ ಸ್ವಾಮಿ ಇವರಿಗೆ ಸದ್ಬುದ್ದಿಯನ್ನು ನೀಡಲಿ. ಶುಭಮಸ್ತು ಎಂದಿದ್ದಾರೆ.

Previous articleಜಾತಿ ಗಣತಿ ವರದಿ ಅನುಷ್ಠಾನ ಶತಸಿದ್ಧ
Next articleಕುಂಭ ಮೇಳದಲ್ಲಿ ರಾಜಕೀಯ: ಶಿರಸಿಯ ತಾಯಿ ನೋಡಿ ಬುದ್ದಿ ಬೆಳೆಸಿಕೊಳ್ಳಲಿ