ಮಹಾಮಹಿಮ ಲಡ್ಡು ಮುತ್ತ್ಯಾ ಹೆಸರು ಬಳಸಿ ಟ್ರೋಲ್: ಭಕ್ತರ ನಂಬಿಕೆಗೆ ಘಾಸಿ

0
60

ಬಾಗಲಕೋಟೆ: ಇಲ್ಲಿನ ಮಹಾಮಹಿಮ ಲಡ್ಡು ಮುತ್ತ್ಯಾರ ಹೆಸರು ಬಳಸಿ ಸಾಮಾಜಿಕ‌ ಜಾಲತಾಣಗಳಲ್ಲಿ ಟ್ರೋಲ್ ಮಾಡುತ್ತಿರುವುದು ಭಕ್ತರ ಭಾವನೆಗಳಿಗೆ ಘಾಸಿ ಮಾಡಿದೆ.

೧೯೯೦ರ ದಶಕದಲ್ಲಿ ಬಾಗಲಕೋಟೆಯಲ್ಲಿ ನೆಲೆಸಿದ್ದ ಲಡ್ಡುಮುತ್ತ್ಯಾ‌ ಪವಾಡಗಳ ಮೂಲಕ ಪ್ರಸಿದ್ಧಿ ಪಡೆದಿದ್ದರು. ಬಾಗಲಕೋಟೆ ಹಾಗೂ ಸುತ್ತಮುತ್ತ ಅವರಿಗೆ ಅಸಂಖ್ಯಾತ ಭಕ್ತರಿದ್ದಾರೆ.

ಇತ್ತೀಚೆಗೆ ಅದೇ ಲಡ್ಡುಮುತ್ತ್ಯಾರ ಅವತಾರ ಎಂದು ಹೇಳಿಕೊಂಡಿರುವ ವ್ಯಕ್ತಿಯೊಬ್ಬರು ತಿರುಗುವ ಫ್ಯಾನ್ ನಿಲ್ಲಿಸುವುದನ್ನು ಪವಾಡ ಎಂದು ಬಿಂಬಿಸಿದ್ದರು, ಅದನ್ನು ಟ್ರೋಲ್ ಮಾಡುತ್ತಿರುವ ಯುವಕರು ಸಹ “ಲಡ್ಡು ಮುತ್ತ್ಯಾನ ಅವತಾರ ಈಗಿನ ಸಂಚಾರಿ ದೇವರ” ಹಾಡು ಬಳಸಿ ಟ್ರೋಲ್ ಮಾಡುತ್ತಿದ್ದಾರೆ.

ಈ ಟ್ರೋಲ್ ನಿಲ್ಲಿಸುವಂತೆ ಈಗ ಅಭಿಯಾನ ಶುರುವಾಗಿದೆ.

Previous articleಗೂಳಿಗಳ ಕಾಳಗ: ಜನರು ಹೈರಾಣ
Next articleಯುವಕರಿಗೆ ಸಂಕಷ್ಟ ತಂದ ಸ್ಟೇಟಸ್..!