ಮಳೆ ಅನಾಹುತಕ್ಕೆ ಸರ್ಕಾರವೇ ನೇರ ಕಾರಣ

0
20

ಹಾವೇರಿ: ಮಳೆಹಾನಿಯ ಸಮೀಕ್ಷೆಯನ್ನು ಸರ್ಕಾರ ಮಾಡಿ ಮಳೆ ಹಾನಿಗೆ ಆದಷ್ಟು ಬೇಗ ಪರಿಹಾರ ಘೋಷಿಸಬೇಕು ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಆಗ್ರಹಿಸಿದ್ದಾರೆ.
ಅವರು ಸೋಮವಾರ ಮಳೆಯಿಂದಾಗಿ ‌ಹಾವೇರಿ‌ ತಾಲೂಕಿನ ಕನಕಾಪೂರ ಗ್ರಾಮದ ಬಳಿ ತುಂಗಾ ಮೇಲ್ದಂಡೆ ಕಾಲುವೆ ಒಡೆದು ಸಂಪೂರ್ಣ ಬೆಳೆ ನಾಶವಾಗಿದ್ದು, ಕೊಚ್ಚಿ ಹೋಗಿರುವ ಕಾಲುವೆಯನ್ನು ವೀಕ್ಷಿಸಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.
ರಾಜ್ಯಾದ್ಯಂತ ಭಾರೀ ಮಳೆಯಾಗುತ್ತಿದ್ದು, ಕಳೆದ‌ ಹತ್ತು ದಿನಗಳಲ್ಲಿ ವಾಡಿಕೆಗಿಂತ‌ ಹೆಚ್ಚಿನ ಮಳೆಯಾಗಿದ್ದು, ಸಾವಿರಾರು ಮನೆಗಳಿಗೆ ನೀರು ನುಗ್ಗಿ ಹಾನಿಯಾಗಿದೆ. ರೈತರ ಬೆಳೆ ನಷ್ಟವಾಗಿದೆ. ಹಾವೇರಿ ಜಿಲ್ಲೆಯಲ್ಲಿಯೂ ಸಹ ಸಾಕಷ್ಟು ಹಾನಿಯಾಗಿದ್ದು, ವರದಾ ನದಿ ತೀರದ ಬೆಳೆಗೆ ಸಾಕಷ್ಟು ಹನಿಯಾಗಿದೆ. ಯುಟಿಪಿ ಕಾಮಗಾರಿ ಅಪೂರ್ಣವಾಗಿದ್ದರ ಪರಿಣಾಮ ಹಳ್ಳದ ನೀರು ಕೆನಲ್‌ಗೆ ನುಗ್ಗುತ್ತಿದೆ. ಅಧಿಕಾರಿಗಳು ಸರ್ಕಾರದ ನಿರ್ಲಕ್ಷ್ಯವೇ ಇದಕ್ಮೆ ಕಾರಣ ಎಂದು ಆರೋಪಿಸಿದರು.
ಮಳೆಹಾನಿಗೆ ಸರ್ಕಾರ ಆದಷ್ಟು ಬೇಗ ಪರಿಹಾರ ಘೋಷಿಸಬೇಕು. ಮಳೆಹಾನಿ ಸಮೀಕ್ಷೆಯನ್ನು ಸರಿಯಾಗಿ ಸರ್ಕಾರ ಮಾಡಬೇಕು. ಜಿಲ್ಲಾಧಿಕಾರಿಗಳ ಖಾತೆಯಲ್ಲಿ ಹಣ ಇರುವುದನ್ನು ಇದಕ್ಕೆ ಬಳಸಿಕೊಳ್ಳಬೇಕು. 18ಕೋಟಿ ರೂ. ತುರ್ತು ಹಣ ಇದೆ ಅದನ್ನು ಬಳಸಿಕೊಳ್ಳಬೇಕು. ಮಳೆಹಾನಿ ಸಂಬಂಧ ಜಿಲ್ಲಾಧಿಕಾರಿ ಜೊತೆ ನಾನು ಚರ್ಚಿಸಿದ್ದೇನೆ. ಈಗಿರುವ ಹಣವನ್ನು ಕೂಡಲೇ ಬಿಡುಗಡೆಗೊಳಿಸಬೇಕೇ‌ ಹೊರತು ತುರ್ತು ಪರಿಹಾರದ ಹಣವನ್ನು ಕನ್ನಡಿಯೊಳಗಿನ‌ ಗಂಟಂತೆ ಮಾಡಬಾರದು. ಮೇಲ್ನೋಟಕ್ಕಷ್ಟೇ ಮಳೆ ಹಾನಿಯನ್ನು ಪರಿಶೀಲಿಸಬಾರದು ಎಂದು ಹೇಳಿದರು.
ಯುಟಿಪಿ ಕೆನಾಲ್‌ನಲ್ಲಿ ವಂಡರ್ಗ್ರಾಂಡ್ ಚಾನೆಲ್‌ಗೆ ಸ್ಟೀಲ್ ಹಾಕಬೇಕು. ಹಾಗಾದಾಗ ಮಾತ್ರ ಕೆ‌ನಲ್ ಉಳಿಯಲು ಸಾಧ್ಯ. ಕೆನಲ್‌ನಲ್ಲಿ ನೀರು ಬರದಂತೆ ತಾತ್ಕಾಲಿಕವಾಗಿ ವಡ್ಡು ಕಟ್ಟಿ, ಬಳಿಕ ಶಾಶ್ವತ ಪರಿಹಾರ ಮಾಡಬೇಕು. ರೈತರಿಗೆ ಈ ಹಿಂದೆ ನಮ್ಮ ಬಿಜೆಪಿ ಸರ್ಕಾರ ರೈತರಿಗೆ ದುಪ್ಪಟ್ಟು ಹಣ ನೀಡಿದೆ. ರೈತರಿಗೆ ನ್ಯಾಯ ಒದಗಿಸುವ ಕೆಲಸವನ್ನು ಸರ್ಕಾರ‌ ಮಾಡಬೇಕು. ಹಾವೇರಿ ಮಳೆಹಾನಿಯಿಂದಾದ‌ ನಷ್ಟಕ್ಕೆ ಸರ್ಕಾರದ‌ ನಿರ್ಲಕ್ಷ್ಯತನವೇ ನೇರ ಕಾರಣ ಎಂದು ಬೊಮ್ಮಾಯಿ ಆರೋಪಿಸಿದರು.
ಇದೇ ವೇಳೆ ಸರ್ಕಾರ ಆದಷ್ಟು ಬೇಗ ಜಾತಿ ಸಮೀಕ್ಷೆ ವರದಿಯನ್ನೂ ಬಿಡುಗಡೆ ಮಾಡಬೇಕೆಂದು ಆಗ್ರಹಿಸಿದರು.

Previous articleಸಾಮಾಜಿಕ ನ್ಯಾಯದ ಅಡಿ ಕೆಲಸ ಮಾಡುತ್ತೇನೆ
Next articleಒತ್ತಡಕ್ಕೆ ಮಣಿದು ಇಂದು ಪಟ್ಟಿ ಬಿಡುಗಡೆ…