ಮಳೆಯಲ್ಲಿದ್ದವರಿಗೆ ಶ್ರೀಮಠದಲ್ಲಿಯೇ ಆಶ್ರಯ ಕಲ್ಪಿಸಿದ ಮಂತ್ರಾಲಯದ ಶ್ರೀಗಳು

0
19

ರಾಯಚೂರು: ಮಂತ್ರಾಲಯದಲ್ಲಿ ಸೋಮವಾರ ರಾತ್ರಿ ಸುರಿದ ಭಾರಿ ಮಳೆಯಿಂದಾಗಿ ಆರಾಧನಾ ಮಹೋತ್ಸವಕ್ಕೆ ಬಂದಿದ್ದ ಭಕ್ತರು ಶ್ರೀಮಠದ ಆವರಣದ ಬಯಲಿಲ್ಲಿಯೇ ಮಲಗಿದ್ದ ಭಕ್ತರ ಸಮಸ್ಯೆಯನ್ನು ಗಮನಿಸಿದ ಶ್ರೀಮಠದ ಪೀಠಾಧಿತಿಗಳಾದ ಸುಬುಧೇಂದ್ರ ತೀರ್ಥ ಶ್ರೀಪಾದಂಗಳವರು ಖುದ್ದಾಗಿ ತಾವೇ ಬಂದ ಶ್ರೀಮಠದ ಬಾಗಿಲನ್ನು ತೆಗೆಯಲು ಭದ್ರತಾ ಸಿಬ್ಬಂದಿಗೆ ಸೂಚನೆ ನೀಡಿ ಶ್ರೀಮಠದ ಪ್ರಾಕಾರದಲ್ಲಿಯೇ ಮಲಗಲು ಭಕ್ತರಿಗೆ ವ್ಯವಸ್ಥೆಯನ್ನು ಮಾಡಿಕೊಟ್ಟರು.
ಆರಾಧನಾ ಮಹೋತ್ಸವವು ಅದ್ದೂರಿಯಾಗಿ ನಡೆಯುತ್ತಿದೆ. ದೂರದ ಊರುಗಳಿಂದ ಆಗಮಿಸಿರುವ ಭಕ್ತರು ಕುಟುಂಬ ಸದಸ್ಯರೊಂದಿಗೆ ಶ್ರೀಮಠದ ಮುಂಭಾದ ಆವರಣದಲ್ಲಿ ಸೋಮವಾರ ರಾತ್ರಿ ಮಲಗಿದ್ದರು. ರಾತ್ರಿ ಭಾರಿ ಮಳೆ ಸುರಿದಿದೆ. ಆಗ ಶ್ರೀಮಠದ ಮಂಟಪದಲ್ಲಿ ಹಾಗೂ ಪ್ರಾಕಾರದಲ್ಲಿ ವ್ಯವಸ್ಥೆ ಮಾಡಿದ ಹಿನ್ನೆಲೆಯಲ್ಲಿ ಶ್ರೀಪಾದಂಗಳವರಿಗೆ ಈ ಕಾರ್ಯಕ್ಕೆ ಭಕ್ತರು ಕೃತಜ್ಞತೆಯನ್ನು ಸಲ್ಲಿಸಿದರು.

Previous articleಮಳೆಯಲ್ಲಿದ್ದವರಿಗೆ ಶ್ರೀಮಠದಲ್ಲಿಯೇ ಆಶ್ರಯ ಕಲ್ಪಿಸಿದ ಮಂತ್ರಾಲಯದ ಶ್ರೀಗಳು
Next articleಮತಾಂತರಕ್ಕೆ ಪ್ರಚೋದನೆ: ಯುವತಿಯರ ವಿರುದ್ಧ ದೂರು