ಮಲಪ್ರಭೆ ಪ್ರವಾಹ: ಗ್ರಾಮದ ಜನರ ಮನವಲಿಸಿ ಸ್ಥಳಾಂತರಿಸಿದ ಅದಿಕಾರಿಗಳು

0
17

ಕುಳಗೇರಿ ಕ್ರಾಸ್: (ಜಿ.ಬಾಗಲಕೋಟೆ) ಮಲಪ್ರಭಾ ನವಿಲುತೀರ್ಥ ಜಲಾಶಯದ ಮೇಲ್ಬಾಗದಲ್ಲಿ ಮಳೆಯ ಆರ್ಭಟ ಜೋರಾಗಿದ್ದು ಮಲಪ್ರಭಾ ನದಿಯ ದಡದಲ್ಲಿನ ತಳಕವಾಡ, ಆಲೂರ ಎಸ್‌ಕೆ, ಕಳಸ, ಕಿತ್ತಲಿ ಗ್ರಾಮಗಳಿಗೆ ನೀರು ನುಗ್ಗಿದ್ದು ಗೋವನಕೊಪ್ಪ, ಬೀರನೂರ,
ಹಾಗನೂರ, ಕರ್ಲಕೊಪ್ಪ ಸೇರಿದಂತೆ ಸುಮಾರು ಗ್ರಾಮಗಳಿಗೆ ಪ್ರವಾಹದ ನೀರು ಬರುವ ಸಾಧ್ಯತೆ ಇದೆ. ಪ್ರವಾಹದ ನೀರು ಹೆಚ್ಚಿತ್ತಿರುವ ಕಾರಣ ಬಾದಾಮಿ ತಹಸಿಲ್ದಾರ ಜೆ ಬಿ ಮಜ್ಜಗಿ ಅವರ ಸೂಚನೆ ಮೆರೆಗೆ ಕಳಸ ಗ್ರಾಮದ ಹತ್ತಿರ ಮಲಪ್ರಭಾ ದಡದಲ್ಲಿರುವ ನಿಂಬಲಗುಂದಿ ಗ್ರಾಮದ ಹರಣಶೀಕಾರಿ ಜನಾಂಗದ 10 ಕುಟುಂಬಗಳ 50ಕ್ಕೂ ಹೆಚ್ಚು ಜನರನ್ನು ಮನವಲಿಸುವ ಮೂಲಕ ಕಂದಾಯ ನಿರೀಕ್ಷಕ ವಿ ಎ ವಿಶ್ವಕರ್ಮ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಿದರು. ಪ್ರವಾಹದ ನೀರು ಹೆಚ್ಚುತ್ತಿರುವ ಕಾರಣ ಮುಂಜಾಗೃತ ಕ್ರಮವಾಗಿ ಸುಮಾರು
ಗ್ರಾಮಗಳಲ್ಲಿನ ಜನ ಜಾನುವಾರುಗಳ ಸಮೇತ ಸುರಕ್ಷಿತ ಸ್ಥಳಕ್ಕೆ ಧಾವಿಸುತ್ತಿದ್ದಾರೆ.

Previous articleಕೆ. ಶಾಮರಾವ್ ದತ್ತಿನಿಧಿ ಪ್ರಶಸ್ತಿಗೆ ಮೋಹನ ಹೆಗಡೆ ಆಯ್ಕೆ
Next articleಕಸ್ತೂರಿ ರಂಗನ್ ವರದಿ: ತಿರಸ್ಕರಿಸುವ ಬಗ್ಗೆ ಚರ್ಚಿಸಿ ತೀರ್ಮಾನ