ಮಂಗನ ಕಾಯಿಲೆಗೆ ಮಹಿಳೆ ಸಾವು

0
7

ಚಿಕ್ಕಮಗಳೂರು(ಕೊಪ್ಪ): ಮಲೆನಾಡಿಗರನ್ನು ಕಂಗೆಡಿಸಿರುವ ಮಂಗನ ಕಾಯಿಲೆಗೆ (ಕೆಎಫ್‌ಡಿ) ತಾಲ್ಲೂಕಿನ ನುಗ್ಗಿ ಗ್ರಾಪಂ ವ್ಯಾಪ್ತಿಯ ದೇವಗನ್ ಎಸ್ಟೇಟ್‌ನ ಕಾರ್ಮಿಕ ಮಹಿಳೆಯೊಬ್ಬರು ಸಾವಿಗೀಡಾಗಿದ್ದಾರೆ.
ಕೊಟ್ರಮ್ಮ(43) ಕೆ.ಎಫ್.ಡಿ.ಗೆ ಬಲಿಯಾದ ಕಾರ್ಮಿಕ ಮಹಿಳೆ. ಎಸ್ಟೇಟಿಗೆ ಸೌದೆ ತರಲು ಹೋದಾಗ ಸೋಂಕು ತಗುಲಿರುವ ಸಾಧ್ಯತೆ ಇದ್ದು, ಕೊಪ್ಪ ಹಾಗೂ ಎನ್.ಆರ್ ಪುರ ಭಾಗದಲ್ಲಿ ಇದೀಗ 6 ಮಂದಿಗೆ ಮಂಗನ ಕಾಯಿಲೆ ಪತ್ತೆಯಾಗಿದೆ. ತೀವ್ರ ಜ್ವರ, ಸುಸ್ತು, ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ ಕಾರ್ಮಿಕ ಮಹಿಳೆಯ ರಕ್ತದ ಮಾದರಿ ಸಂಗ್ರಹಿಸಿದ್ದಾಗ ಸೋಂಕು ದೃಢವಾಗಿದೆ.
ಈ ಹಿನ್ನೆಲೆಯಲ್ಲಿ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ಸಾಗಿಸುವಾಗ ಮಾರ್ಗ ಮಧ್ಯೆ ಸಾವನ್ನಪ್ಪಿದ್ದಾರೆ.

Previous articleಕರ್ತವ್ಯ ಲೋಪ: ಪಿಡಿಓ ಅಮಾನತು
Next articleಪಾಕ್ ಪರ ಘೋಷಣೆ ಕೂಗಿದವನಿಗೆ ಶಾಸ್ತಿ ಆಗಬೇಕು