ಭೀಕರ ಅಪಘಾತ: ಮಗು ಸೇರಿ ಮೂವರ ಸಾವು

0
6

ಕಲಾದಗಿ: ಕಾರು ಹಾಗು ಪ್ರಯಾಣಿಕರಿದ್ದ ಟಂಟಂ ನಡುವಿನ ಮುಖಾಮುಖಿ ಡಿಕ್ಕಿಯಲ್ಲಿ ಟಂಟಂನಲ್ಲಿದ್ದ ಪುಟ್ಟ ಮಗು ಸೇರಿ ಮೂವರು ಸ್ಥಳದಲ್ಲೇ ಸಾವನ್ನಪ್ಪಿರುವ ದುರ್ಘಟನೆ ಬಾಗಲಕೊಟ ಜಿಲ್ಲೆಯ ಕಲಾದಗಿ ಪೋಲಿಸ್ ಠಾಣಾ ವ್ಯಾಪ್ತಿಯ ತುಳಸಿಗೇರಿ ಸಮೀಪದ ರಾಮಾರೂಢ ಮಠದ ಬಳಿ ಮಧ್ಯಾಹ್ನ ೧.೩೦ ರ ಸುಮಾರಿಗೆ ಸಂಭವಿಸಿದೆ. ತಾಯಿಯೊಂದಿಗಿದ್ದ ಕಲಾದಗಿಯ ಒಂದು ವರ್ಷದ ಗೌರಿ ಎಂಬ ಮಗು ಹಾಗು ತುಳಸಿಗೇರಿಯವರು ಎನ್ನಲಾದ ಇಬ್ಬರು ಪುರುಷರು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ಗದ್ದನಕೇರಿಯ ವಿಜಯ ತೇಲಿ(೬೨), ತುಳಸಿಗೇರಿಯ ಶಂಕ್ರಪ್ಪ ಮೆಳ್ಳಿಗೆರಿ ಹಾಗು ಕಲಾದಗಿಯ ಗೌರಿ ಭ, ಚವ್ಹಾಣ(೧) ಟಂಟಂನಲ್ಲಿದ್ದ ಸಾವನ್ನಪ್ಪಿದವರು, ಟಂಟಂನಲ್ಲಿದ್ದು ಗಾಯಗೊಂಡಿರುವ ಇನ್ನುಳಿದ ಪ್ರಯಾಣಿಕರನ್ನು ಬಾಗಲಕೊಟ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ.

Previous articleಸಾಮಾಜಿಕ ನ್ಯಾಯದ ಹರಿಕಾರ
Next articleಈ ರಾಮ ಆರಾಮ