ಗೋವಾ: ಭಾರತ ಪ್ರಾಚೀನ ವೈದ್ಯಕೀಯ ಪರಂಪರೆಯನ್ನು ಹೊಂದಿದ್ದು, ಅದರಲ್ಲಿ ಚರಕ ಮತ್ತು ಶುಶ್ರೂತರಿಗೆ ವಿಶೇಷ ಸ್ಥಾನಮಾನವಿದೆ. ಅವರು ವೈದ್ಯಕೀಯ ಜಗತ್ತಿಗೆ ನೀಡಿರುವ ಕೊಡುಗೆ ಅಪಾರ ಎಂದು ಉಪ ರಾಷ್ಟ್ರಪತಿ ಜಗದೀಪ್ ಧನ್ ಕರ್ ಹೇಳಿದ್ದಾರೆ.
ಇಂದು ಗೋವಾದ ರಾಜಧಾನಿ ಪಣಜಿಯ ರಾಜಭವನದಲ್ಲಿ ಸ್ಥಾಪಿಸಲಾಗಿರುವ ಆಯುರ್ವೇದದ ಪಿತಾಮಹಾ ಆಚಾರ್ಯ ಚರಕ ಮತ್ತು ಶಸ್ತ್ರ ಚಿಕಿತ್ಸೆಯ ಪಿತಾಮಹಾ ಸಂತ ಶುಶ್ರೂತ ಅವರ ಪುತ್ಥಳಿಯನ್ನು ಉದ್ಘಾಟಿಸಿ ಮಾತನಾಡಿ ಇತ್ತೀಚಿನ ದಿನಗಳಲ್ಲಿ ಆಯುರ್ವೇದ ಮತ್ತು ಯೋಗಕ್ಕೆ ಹೆಚ್ಚಿನ ಜಾಗತಿಕ ಮಾನ್ಯತೆ ದೊರಕುತ್ತಿದ್ದು, ದೇಶ-ವಿದೇಶಗಳಿಂದ ಚಿಕಿತ್ಸೆಗಾಗಿ ಭಾರತಕ್ಕೆ ಆಗಮಿಸುತ್ತಿದ್ದಾರೆ. ಇದರಿಂದ ವೈದ್ಯಕೀಯ ಪ್ರವಾಸೋದ್ಯೋಮವು ವೃದ್ಧಿಯಾಗುತ್ತಿದೆ ಮತ್ತು ದೇಶದ ಪ್ರಗತಿಗೂ ನೆರವಾಗುತ್ತಿದೆ. ದೇಶದಲ್ಲಿ ವಿಶೇಷ ವೈದ್ಯಕೀಯ ಸೇವೆಗಳನ್ನು ನೀಡಲಾಗುತ್ತಿದ್ದು, ಅದಕ್ಕೆ ಭಾರಿ ಬೇಡಿಕೆ ಇದೆ , ಭಾರತ ವಿಭಿನ್ನ ನಾಗರಿಕತೆಯನ್ನು ಹೊಂದಿರುವ ದೇಶವಾಗಿದೆ. ನಾನು ಖಂಡಿತವಾಗಿಯೂ ಪಾಶ್ಚಿಮಾತ್ಯ ವೈದ್ಯಕೀಯ ವಿರೋಧಿಯಲ್ಲ. #ನಳಂದ, #ತಕ್ಷಶಿಲಾ ಮತ್ತು ಇನ್ನೂ ಅನೇಕ ಶ್ರೇಷ್ಠ ಸಂಸ್ಥೆಗಳನ್ನು ನಾವು ಹೊಂದಿದ್ದಾಗ, ಪ್ರಪಂಚದಾದ್ಯಂತ ಜನರು ಗುಂಪುಗುಂಪಾಗಿ ಬಂದರು. ಅವರು ನಮಗೆ ನೀಡಿದರು ಮತ್ತು ಅವರು ನಮ್ಮಿಂದ ತೆಗೆದುಕೊಂಡರು. ಅದು ದ್ವಿಮುಖ ಸಂಚಾರವಾಗಿತ್ತು. ಗ್ರಹದಲ್ಲಿ ಎಲ್ಲಿಯಾದರೂ ಒಳ್ಳೆಯದು ಏನಿದೆಯೋ ಅದನ್ನು ಹೀರಿಕೊಳ್ಳಬೇಕು. ಮತ್ತು ನಮ್ಮೊಂದಿಗಿದೆಯೋ ಅದನ್ನು ಪ್ರಸಾರ ಮಾಡಬೇಕು. ನಾವು ಸಕಾರಾತ್ಮಕವಾದ ಎಲ್ಲವನ್ನೂ ಸ್ವೀಕರಿಸುತ್ತೇವೆ, ಆದರೆ ಎಲ್ಲವೂ ಪಶ್ಚಿಮದಿಂದ ಬರಬೇಕು ಎಂಬ ನಂಬಿಕೆಯಿಂದ ಈ ದೇಶವನ್ನು ಮುನ್ನಡೆಸಲು ನಾವು ಬಿಡಬಾರದು. ಅದು ಈಗಾಗಲೇ ನಮ್ಮೊಂದಿಗೆ ಇದೆ. ಸರ್ಕಾರದ ದೂರದೃಷ್ಟಿಯಿಂದಾಗಿ ದೇಶ ಆರೋಗ್ಯ ವಲಯದಲ್ಲಿ ಮಹತ್ವದ ಸಾಧನೆ ಮಾಡುತ್ತಿದೆ. ಆಯುರ್ವೇದ, ಯೋಗ ಮತ್ತು ಗಿಡಮೂಲಿಕೆ ಪರಂಪರೆಗೆ ಹೆಚ್ಚಿನ ಮನ್ನಣೆ ಸಿಗುತ್ತಿದ್ದು, ಅವುಗಳನ್ನು ಆಧುನಿಕ ತಂತ್ರಜ್ಞಾನಗಳ ಜೊತೆ ಬೆಸೆದು ಇನ್ನಷ್ಟು ಜನಪ್ರಿಯಗೊಳಿಸುವ ಅಗತ್ಯವಿದೆ ಎಂದು ಅವರು ಹೇಳಿದರು.