ದಾವಣಗೆರೆ: ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಜಿಲ್ಲಾ ಪ್ರತಿನಿಧಿ ಮತ್ತು ರಾಜ್ಯದ ಅಧ್ಯಕ್ಷರನ್ನು ಆಯ್ಕೆ ಮಾಡಲು ನಗರದ ಬ್ರಾಹ್ಮಣ ವಿದ್ಯಾರ್ಥಿ ನಿಲಯದಲ್ಲಿ ಭಾನುವಾರ
ಮತದಾನ ನಡೆಯಿತು.
ಮಧ್ಯಾಹ್ನ ೧ ಗಂಟೆ ವೇಳೆಗೆ ದಾವಣಗೆರೆ ಜಿಲ್ಲೆ ಶೇ.೪೮ರಷ್ಟು ಮತದಾನ ನಡೆದರೆ, ಚಿತ್ರದುರ್ಗ ಜಿಲ್ಲೆ ಶೇ.೩೮ರಷ್ಟು ಮತದಾನ ನಡೆದಿದೆ. ದಾವಣಗೆರೆ ಜಿಲ್ಲೆಯಲ್ಲಿ ಒಟ್ಟು ೧೨೫೬ ಮತದಾರರಿದ್ದು, ೫೨೦ ಮತದಾರರ ತಮ್ಮ ಚಲಾಯಿಸಿದ್ದರೆ, ಚಿತ್ರದುರ್ಗ ಜಿಲ್ಲೆಯಲ್ಲಿ ೪೫೧ ಮತದಾರರಿದ್ದು, ೧೪೮ ಮತದಾರರ ತಮ್ಮ ಹಕ್ಕು ಚಲಾಯಿಸಿದ್ದಾರೆ.
ದಾವಣಗೆರೆ ಜಿಲ್ಲೆಯ ಪ್ರತಿನಿಧಿ ಸ್ಥಾನಕ್ಕೆ ಭಾನುಪ್ರಕಾಶ ಶರ್ಮಾ(ಅಶೋಕ ಹಾರನಹಳ್ಳಿಯವರ) ಬಣದಿಂದ ಎನ್.ಆರ್.ನಾಗಭೂಷಣ್ ರಾವ್ ಹಾಗೂ ಎಸ್.ರಘುನಾಥ್ ಅವರ ಬಣದಿಂದ ಸಿ.ಕೆ.ಆನಂದತೀರ್ಥಚಾರ್ ಕಣದಲ್ಲಿದ್ದಾರೆ.
ಚಿತ್ರದುರ್ಗ ಜಿಲ್ಲೆಯ ಪ್ರತಿನಿಧಿ ಸ್ಥಾನಕ್ಕೆ ಭಾನುಪ್ರಕಾಶ ಶರ್ಮಾ(ಅಶೋಕ ಹಾರನಹಳ್ಳಿಯವರ) ಬಣದಿಂದ ಟಿ.ಕೆ.ನಾಗರಾಜ್ ರಾವ್ ಹಾಗೂ ಎಸ್.ರಘುನಾಥ್ ಅವರ ಬಣದಿಂದ ವಿ.ವಾದಿರಾಜ ಕಣದಲ್ಲಿದ್ದಾರೆ.
ಮತದಾರರು ಮತ ಚಲಾಯಿಸಲು ಉತ್ಸುಕದಿಂದ ಮತದಾನ ಕೇಂದ್ರ ಆಗಮಿಸಿದ್ದು, ಎರಡು ಬಣದವರು ಮತ ನೀಡುವಂತೆ ವಿಪ್ರ ಬಾಂಧವರಲ್ಲಿ ಮನವಿ ಮಾಡುತ್ತಿದ್ದರು. ಮತದಾನ ಕೇಂದ್ರದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ.
Home ತಾಜಾ ಸುದ್ದಿ ಬ್ರಾಹ್ಮಣ ಮಹಾಸಭಾ ಚುನಾವಣೆ:ಮಧ್ಯಾಹ್ನದ ವೇಳೆಗೆ ದಾವಣಗೆರೆ ಜಿಲ್ಲೆ ಶೇ. ೪೮, ಚಿತ್ರದುರ್ಗ ಜಿಲ್ಲೆ ಶೇ. ೩೮...